ಜೈಪುರ(ರಾಜಸ್ಥಾನ) :ರೈಲ್ವೆಯ ಖಾಸಗೀಕರಣ ವಿಚಾರ, ಕೇಂದ್ರ ಸರ್ಕಾರದ ವಿರುದ್ಧವಾಗಿ ವಿಪಕ್ಷಗಳು ಹರಡುತ್ತಿರುವ ಗೊಂದಲಮಯ ವದಂತಿಗಳಷ್ಟೇ. ಖಾಸಗಿಯಾಗಿ ರೈಲು ಓಡಿಸುವ ಮೂಲಕ ಯಾರಿಗೂ ಯಾವುದೇ ಹಾನಿ ಆಗೋದಿಲ್ಲ. ವಿರೋಧ ಪಕ್ಷಕ್ಕೆ ಯಾವುದೇ ಕೆಲಸವಿಲ್ಲ, ಜನರಲ್ಲಿ ಗೊಂದಲ ಉಂಟುಮಾಡುವ ಕೇಂದ್ರದ ನೀತಿಗಳನ್ನು ತಪ್ಪಾಗಿ ತಿಳಿಸಲಾಗುತ್ತಿದೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ರೈಲ್ವೆ ಖಾಸಗೀಕರಣ ವಿಪಕ್ಷಗಳು ಹರಡುತ್ತಿರುವ ವದಂತಿಯಷ್ಟೇ: ಸುರೇಶ್ ಅಂಗಡಿ ಸ್ಪಷ್ಟನೆ - ಭಾರತೀಯ ಸ್ವಚ್ಛ ರೈಲು ನಿಲ್ದಾಣ ಜೈಪುರ
ರೈಲ್ವೆಯ ಖಾಸಗೀಕರಣ ವಿಚಾರದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧವಾಗಿ ವಿಪಕ್ಷಗಳು ಹರಡುತ್ತಿರುವ ಗೊಂದಲಮಯ ವದಂತಿಗಳಷ್ಟೇ. ಜನರಲ್ಲಿ ಗೊಂದಲ ಹರಡಲು, ಕೇಂದ್ರದ ನೀತಿಗಳನ್ನು ತಪ್ಪಾಗಿ ತಿಳಿಸಲಾಗುತ್ತಿದೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ಭಾರತೀಯ ಸ್ವಚ್ಛ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ಶ್ಲಾಘಿಸಿದ ಅಂಗಡಿ
ಇಂದು ಜೈಪುರಕ್ಕೆ ಆಗಮಿಸಿದ ಸುರೇಶ್ ಅಂಗಡಿ, ಜೈಪುರ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರು. ಈ ವೇಳೆ ನಿಲ್ದಾಣದ ಶುಚಿ, ಕಾರ್ಯವೈಖರಿಯನ್ನು ಕೊಂಡಾಡಿದರು.