ಕರ್ನಾಟಕ

karnataka

By

Published : Oct 22, 2020, 6:57 AM IST

ETV Bharat / bharat

1,400 ಕೋಟಿ ಆದಾಯದ ಗುರಿ: ರೈಲಿನಲ್ಲಿ ಪ್ಯಾಂಟ್ರಿ ಕಾರು ಸೇವೆ ಸ್ಥಗಿತಕ್ಕೆ ಚಿಂತನೆ

ರೈಲಿನಲ್ಲಿರುವ ಪ್ಯಾಂಟ್ರಿ ಕಾರುಗಳ ಸೇವೆ ಸ್ಥಗಿತಗೊಳಿಸಿ ಅದರ ಬದಲು ಉದ್ದವಿರುವ ರೈಲುಗಳಿಗೆ ಮೂರು ಹಂತದ ಹವಾನಿಯಂತ್ರಿತ ಬೋಗಿಗಳನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

Railway may soon remove pantry cars
ಶ್ರೀಘ್ರದಲ್ಲೆ ರೈಲಿನಲ್ಲಿ ಪ್ಯಾಂಟ್ರಿ ಕಾರು ಸೇವೆ ಸ್ಥಗಿತಕ್ಕೆ ಚಿಂತನೆ

ನವದೆಹಲಿ:ಕೋವಿಡ್-19 ಸೋಂಕಿನ ಮಧ್ಯೆ ಹೆಚ್ಚಿನ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿರುವ ಭಾರತೀಯ ರೈಲ್ವೆ, ಶೀಘ್ರದಲ್ಲೇ ಪ್ಯಾಂಟ್ರಿ ಕಾರು ಸೇವೆಗಳನ್ನು ಸ್ಥಗಿತಗೊಳಿಸಿ ಅದರ ಬದಲು ಉದ್ದವಿರುವ ರೈಲುಗಳಿಗೆ ಮೂರು ಹಂತದ ಹವಾನಿಯಂತ್ರಿತ ಬೋಗಿಗಳನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಿದೆ.

ರೈಲ್ವೆ ಪ್ಯಾಂಟ್ರಿ ಕಾರುಗಳನ್ನು ದೂರದ-ಮೇಲ್ ಮತ್ತು ಎಕ್ಸ್‌ಪ್ರೆಸ್, ಸೂಪರ್‌ ಫಾಸ್ಟ್ ಮತ್ತು ಪ್ರೀಮಿಯರ್ ರೈಲುಗಳಲ್ಲಿ ಬದಲಾಯಿಸಲು ಯೋಜಿಸುತ್ತಿದ್ದು, ಇದು 1,400 ಕೋಟಿ ರೂ.ಗಳ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್-19 ಕಾರಣ ರೈಲ್ವೆ ಪ್ಯಾಂಟ್ರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದನ್ನು ಶಾಶ್ವತವಾಗಿ ತೆಗೆದು ಹಾಕಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಐಆರ್​ಸಿಟಿಸಿಯ ಮೂಲ ಅಡುಗೆ ಮನೆಗಳನ್ನು ಅವಲಂಬಿಸಲು ಸಚಿವಾಲಯಕ್ಕೆ ವಿವಿಧ ಸಲಹೆಗಳನ್ನು ನೀಡಲಾಗುತ್ತಿತ್ತು.

ಅಖಿಲ ಭಾರತ ರೈಲ್ವೆಮೆನ್ ಫೆಡರೇಶನ್ (ಎಐಆರ್​ಎಫ್), ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಪ್ಯಾಂಟ್ರಿ ಕಾರುಗಳನ್ನು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕೋಚ್‌ಗಳೊಂದಿಗೆ ಬದಲಾಯಿಸುವಂತೆ ಸೂಚಿಸಿದೆ. "ಊಟ ಮತ್ತು ಇತ್ಯಾದಿ ಅಗತ್ಯ ವಸ್ತುಗಳನ್ನು ಇ-ಬುಕ್ಕಿಂಗ್​ ಮೂಲಕ ಸುಗಮಗೊಳಿಸಬಹುದು ಮತ್ತು ಪ್ರಮುಖ ಬೇಸ್ ಕಿಚನ್‌ಗಳಲ್ಲಿ ಇದನ್ನು ತಯಾರಿಸಬಹುದು. ಇದು ಖರ್ಚನ್ನು ಉಳಿಸುವುದಲ್ಲದೆ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರೈಲ್ವೆ ಮಂಡಳಿ ಮತ್ತು ಎಲ್ಲಾ ವಲಯಗಳಿಗೆ ಸಲಹೆ ಮತ್ತು ಅದನ್ನು ಕಾರ್ಯಗತಗೊಳಿಸುವ ಮಾರ್ಗಗಳನ್ನು ಪರಿಶೀಲಿಸುವಂತೆ ಗೋಯಲ್ ಕೇಳಿದ್ದಾರೆ. ಈ ಪತ್ರವನ್ನು ಎಲ್ಲಾ ವಲಯದ ರೈಲ್ವೆಗಳಿಗೆ ಕಳುಹಿಸಲಾಗಿದ್ದು, ಈ ಕ್ರಮವನ್ನು ಯೋಜಿಸಲು ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ.

ಪ್ಯಾಂಟ್ರಿ ಕಾರು ಎಂಬುದು ರೈಲಿನಲ್ಲಿರುವ ವಿಶೇಷ ಕೋಚ್​ ಆಗಿದ್ದು, ಇದನ್ನು ಪ್ರಯಾಣಿಕರಿಗೆ ಆಹಾರವನ್ನು ತಯಾರಿಸಲು ಮತ್ತು ಪೂರೈಸಲು ಬಳಸಲಾಗುತ್ತದೆ.

ABOUT THE AUTHOR

...view details