ಕರ್ನಾಟಕ

karnataka

ETV Bharat / bharat

ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಾಹುಲ್ - ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನವಾದ ಇಂದು ಛತ್ತೀಸ್​ಗಢದಲ್ಲಿ ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆ ಪ್ರಾರಂಭವಾಗಲಿದೆ.

rahul
rahul

By

Published : May 21, 2020, 9:50 AM IST

ನವದೆಹಲಿ: ಛತ್ತೀಸ್​ಗಢದಲ್ಲಿ ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆ ಪ್ರಾರಂಭವಾಗಲಿದ್ದು, ಇದು 19 ಲಕ್ಷ ರೈತರಿಗೆ ಅನುಕೂಲವಾಗುವುದರ ಜೊತೆಗೆ ಸಾಗುವಳಿ ಪ್ರದೇಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ತಿಳಿಸಿದ್ದಾರೆ.

ರಾಜ್ಯದ ರೈತರು ಹೆಚ್ಚು ಸಂಪಾದಿಸಲು ಮತ್ತು ಹೆಚ್ಚಿನ ಪ್ರದೇಶವನ್ನು ಸಾಗುವಳಿಗೆ ತರಲು ಸಹಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನವಾದ ಇಂದು ಈ ಯೋಜನೆ ಪ್ರಾರಂಭವಾಗಲಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲಿದ್ದಾರೆ ಎಂದು ಭೂಪೇಶ್ ಬಾಗೆಲ್ ತಿಳಿಸಿದ್ದಾರೆ.

ABOUT THE AUTHOR

...view details