ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಎರಡನೇ ಬಾರಿ ಅಧಿಕಾರಕ್ಕೇರಿದ ಪ್ರಧಾನಿ ಮೋದಿ ಸರ್ಕಾರ 100 ದಿನ ಪೂರೈಸಿದೆ. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಅಭಿವೃದ್ಧಿ ಮಾಡದೆ 100 ದಿನ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆಗಳು: ರಾಹುಲ್ ಗಾಂಧಿ - ರಾಹುಲ್ ಗಾಂಧಿ
ನರೇಂದ್ರ ಮೋದಿ ನೇತೃತ್ವದ ಸರ್ಕಾರ 100 ದಿನ ಪೂರೈಸಿದ್ದು, ಈ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಅಭಿವೃದ್ಧಿ ಮಾಡದೆ ನೂರು ದಿನ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಪ್ರಜಾಪ್ರಭುತ್ವದ ಅಧಃಪತನ ಟೀಕೆ ಮಾಡುವ ಮಾಧ್ಯಮಗಳ ಮೇಲೆ ಬಿಗಿ ಹಿಡಿತ, ನಾಯಕತ್ವದ ಕೊರತೆ, ಧ್ವಂಸಗೊಂಡ ಆರ್ಥಿಕತೆ ಇವೇ ಸಾಧನೆಗಳು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕ ಗಾಂಧಿ ಸಹ ಕೇದ್ರದ ವಿರುದ್ಧ ಕಿಡಿಕಾರಿದ್ದು, ದೇಶ ಅರ್ಥಿಕ ಸಮಸ್ಯೆಯಿಂದ ಕಂಗಾಲಾಗಿದ್ದರೂ ಸರ್ಕಾರ ಮೌನಕ್ಕೆ ಶರಣಾಗಿದೆ. ಕಂಪನಿಗಳು ತೊಂದರೆಯಲ್ಲಿದ್ದು, ವ್ಯವಹಾರಗಳು ಸ್ಥಗಿತಗೊಂಡಿವೆ. ನಾಟಕ, ವಂಚನೆ, ಸುಳ್ಳು ಮತ್ತು ಪ್ರಚಾರದಿಂದ ದೇಶ ಆಪತ್ತಿನ ಸ್ಥಿತಿಯಲ್ಲಿರುವುದನ್ನು ಜನರಿಂದ ಮರೆಮಾಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.