ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಕಾರ್ಯವನ್ನು ಹೊಗಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಲ್ಲಿ ಇಚ್ಛಾಶಕ್ತಿ ಇರುತ್ತದೆಯೋ ಅಲ್ಲಿ ಒಂದು ಮಾರ್ಗ ಇರುತ್ತದೆ ಎಂದಿದ್ದಾರೆ
'ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ರಾಜಸ್ಥಾನ, ಛತ್ತೀಸ್ಗಢ, ಪಂಜಾಬ್ ಮತ್ತು ಪುದುಚೇರಿ ಕೊರೊನಾ ವೈರಸ್ ವಿರುದ್ಧ ಧೈರ್ಯದಿಂದ ಹೋರಾಡುತ್ತಿವೆ. ಹೊಸ ವಿಶೇಷ ಆಸ್ಪತ್ರೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಛತ್ತೀಸ್ಗಢದಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು 20 ದಿನಗಳಲ್ಲಿ ಸಿದ್ಧಪಡಿಸಲಾಗಿದೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಕೈ ಆಡಳಿತದ ರಾಜ್ಯಗಳನ್ನು ಅನುಸರಿಸಲು ನವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸಲಗೆ ನೀಡಿದ್ದ ಕಾಂಗ್ರೆಸ್, ರಾಜಸ್ಥಾನ ಮತ್ತು ಪಂಜಾಬ್ ಸರ್ಕಾರಗಳು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕಗಳ ವಿದ್ಯುತ್ ಬಿಲ್ಗಳಲ್ಲಿ ನಿಗದಿತ ಶುಲ್ಕ ಪಡೆಯುವುದನ್ನು ಮುಂದೂಡಿದೆ. ದೆಹಲಿ ಸರ್ಕಾರ ಕೂಡ ಇದನ್ನು ಅನುಸರಿಸುವಂತೆ ಕೇಳಿಕೊಂಡಿತ್ತು.
ಛತ್ತೀಸ್ಗಢ ಸರ್ಕಾರವು 86 ರಷ್ಟು ಕುಟುಂಬಗಳಿಗೆ ಎರಡು ತಿಂಗಳ ಪಡಿತರವನ್ನು ಉಚಿತವಾಗಿ ನೀಡಿದೆ. ಇದರಲ್ಲಿ 70 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ ಮತ್ತು 3 ಕೆಜಿ ದ್ವಿದಳ ಧಾನ್ಯಗಳನ್ನು ನೀಡಲಾಗಿದೆ. ಅದೇ ರೀತಿ ನವದೆಹಲಿಯ E,F,G,H ವರ್ಗದ ಪ್ರದೇಶದಲ್ಲಿರುವ ಜನರಿಗೆ ಎರಡು ತಿಂಗಳ ಪಡಿತರ ನೀಡಿಬೇಕು ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳಿದ್ದರು.