ನವದೆಹಲಿ: ಕೋವಿಡ್ -19 ಸೋಂಕಿನ ವಿರುದ್ಧ ನಾಗರಿಕರಿಗೆ ಲಸಿಕೆ ಹಾಕುವ ಸರ್ಕಾರದ ಕಾರ್ಯತಂತ್ರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮುಖಾಂತರ ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ.
ಕೊರೊನಾ ವೈರಸ್ ಸೋಂಕಿಗೆ ಯಾವ ಲಸಿಕೆಯ ಮೆಂಬರ್ ಆಯ್ಕೆ ಮಾಡಲಾಗುತ್ತದೆ ಮತ್ತು ಉಚಿತ ವ್ಯಾಕ್ಸಿನೇಷನ್ ಖಚಿತಪಡಿಸಿಕೊಳ್ಳಲು ಪಿಎಂ ಕೇರ್ಸ್ ಫಂಡ್ ಬಳಸಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರಧಾನಿ ರಾಷ್ಟ್ರಕ್ಕೆ ಉತ್ತರ ಹೇಳಲೇಬೇಕು: 1. ಎಲ್ಲಾ ಕೋವಿಡ್ ಲಸಿಕೆಗಳಲ್ಲಿ ಸರ್ಕಾರ ಯಾವ ಲಸಿಕೆ ಆಯ್ಕೆ ಮಾಡುತ್ತೆ ಮತ್ತು ಏಕೆ? 2. ಲಸಿಕೆಯನ್ನು ಮೊದಲು ಯಾರು ಪಡೆಯುತ್ತಾರೆ ಮತ್ತು ವಿತರಣಾ ಕಾರ್ಯತಂತ್ರ ಯಾವುದು? 3. ಉಚಿತ ಲಸಿಕೆಗೆ ಪಿಎಂ ಕೇರ್ಸ್ ನಿಧಿಯಿಂದ ಹಣ ಬಳಸಲಾಗುತ್ತಿದೆಯೇ? 4. ಎಲ್ಲಾ ಭಾರತೀಯರಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ? ಎಂದು ಕೇಳಿದ್ದಾರೆ.
ಮತ್ತೆ ಕೈ ಮೀರಿದ ಕೊರೊನಾ: ನಾಳೆ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ, ಲಸಿಕೆ ವಿತರಣೆ ಚರ್ಚೆ
ಕೋವಿಡ್-19 ಲಸಿಕೆ ಅಭಿವೃದ್ಧಿ, ನಿಯಂತ್ರಕ ಅನುಮೋದನೆ ಮತ್ತು ಸಂಗ್ರಹಣೆಗೆ ಸಂಬಂಧ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಅವರು ಶುಕ್ರವಾರ ಸಭೆ ನಡೆಸಿದ್ದರು. ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ನಾಳೆ ಮುಖ್ಯಮಂತ್ರಿಗಳ ವರ್ಚ್ಯುವಲ್ ಸಭೆ ಕರೆದಿದ್ದಾರೆ. ಈ ವೇಳೆ ಲಸಿಕೆ ವಿತರಣೆ ಕಾರ್ಯಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.