ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ ಮೂರು ದಿನಗಳ ಕಾಲ ಕೈಗೊಳ್ಳಬೇಕಿದ್ದ ಜೈಸಲ್ಮೇರ್ ಪ್ರವಾಸ ರದ್ದುಗೊಂಡಿದೆ. ಪ್ರವಾಸ ರದ್ದತಿಗೆ ಕಾರಣ ಬಹಿರಂಗವಾಗಿಲ್ಲ. ಆದರೆ, ಜಿಲ್ಲಾಡಳಿತ, ಪೊಲೀಸ್ ಮತ್ತು ಇತರೆ ಎಜೆನ್ಸಿಗಳು ಅವರ ಪ್ರಯಾಣ ರದ್ದುಪಡಿಸಿರುವ ಬಗ್ಗೆ ಸ್ಪಷ್ಟನೆ ನೀಡಿವೆ.
ರಾಹುಲ್ ಗಾಂಧಿಯವರ ಜೈಸಲ್ಮೇರ್ ಪ್ರವಾಸ ದಿಢೀರ್ ರದ್ದು - ರಾಹುಲ್ ಗಾಂಧಿ ಲೇಟೆಸ್ಟ್ ನ್ಯೂಸ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೈಸಲ್ಮೇರ್ ಪ್ರವಾಸ ದಿಢೀರ್ ರದ್ದಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಮತ್ತು ಇತರೆ ಎಜೆನ್ಸಿಗಳು ಅವರ ಪ್ರಯಾಣ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿವೆ.
ಜೈಸಲ್ಮೇರ್ ಪ್ರವಾಸ ರದ್ದು..!
ಕೆಲ ದಿನಗಳ ಹಿಂದೆಯೇ, ರಾಹುಲ್ ಗಾಂಧಿ ಅವರ ಜೈಸಲ್ಮೇರ್ ಪ್ರವಾಸ ನಿಗದಿಯಾಗಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿದ್ದು, ವಾಸ್ತವ್ಯಕ್ಕಾಗಿ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಪ್ರವಾಸ ದಿಢೀರ್ ರದ್ದಾಗಿದೆ.
ಮುಂದಿನ ಪ್ರವಾಸದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ, ರಾಗಾ ಸಹೋದರಿ ಪ್ರಿಯಾಂಕಾ, ಮಕ್ಕಳು ಮತ್ತು ಸ್ನೇಹಿತರು ಅವರ ಮನೆಗೆ ಬರುತ್ತಿರುವುದರಿಂದ ಪ್ರವಾಸ ರದ್ದು ಪಡಿಸಿದ್ದಾರೆ ಎನ್ನಲಾಗ್ತಿದೆ.
Last Updated : Nov 11, 2020, 12:39 PM IST