ಕರ್ನಾಟಕ

karnataka

ETV Bharat / bharat

ಆರೋಗ್ಯ ಬಿಕ್ಕಟ್ಟಿನ ವೇಳೆ ರಾಹುಲ್ ಗಾಂಧಿ ಲಾಕ್​ಡೌನ್​ ವಿರುದ್ಧ ಮಾತಾಡಬಾರದು: ಬಿಜೆಪಿ - ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ

ಲಾಕ್​ಡೌನ್ ಬಗ್ಗೆ ಇಂತಹ ಹೇಳಿಕೆಗಳು ರಾಹುಲ್ ಗಾಂಧಿಗೆ ಸರಿಹೊಂದುವುದಿಲ್ಲ. ನೀವು ಇದನ್ನು (ಭಾರತ) ಇತರ ದೇಶಗಳೊಂದಿಗೆ ಹೋಲಿಸಿದರೂ ನಾವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

Sudesh Verma
ಸುದೇಶ್ ವರ್ಮಾ

By

Published : May 26, 2020, 9:29 PM IST

Updated : May 26, 2020, 10:54 PM IST

ನವದೆಹಲಿ: ಕೊರೊನಾ ವೈರಸ್ ನಿಯಂತ್ರಣದಲ್ಲಿ ಭಾರತ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ವಿಧಿಸಿರುವ ರಾಷ್ಟ್ರೀಯ ಲಾಕ್‌ಡೌನ್ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಕಾರಾತ್ಮಕವಾಗಿ ಮಾತನಾಡುವುದು ಒಳಿತಲ್ಲ ಎಂದು ಬಿಜೆಪಿ ಹೇಳಿದೆ.

ಲಾಕ್​ಡೌನ್ ಬಗ್ಗೆ ಇಂತಹ ಹೇಳಿಕೆಗಳು ರಾಹುಲ್ ಗಾಂಧಿಗೆ ಸರಿ ಹೊಂದುವುದಿಲ್ಲ. ನೀವು ಇದನ್ನು (ಭಾರತ) ಇತರ ದೇಶಗಳೊಂದಿಗೆ ಹೋಲಿಸಿದರೂ ನಾವು ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆದರೆ, ಉತ್ತಮ ಆರೋಗ್ಯವನ್ನು ಕಾಪಾಡಲು ಸರ್ಕಾರ ಎಲ್ಲವನ್ನು ಮಾಡುತ್ತಿದೆ. ಲಾಕ್​ಡೌನ್ ಜಾರಿ ಆಗಿದ್ದರಿಂದ ಆರ್ಥಿಕತೆ ತೊಂದರೆ ಅನುಭವಿಸಬೇಕಾಗಿತ್ತು. ಸರ್ಕಾರವು 20 ಲಕ್ಷ ಕೋಟಿ ರೂ. ಉತ್ತೇಜಕ ಪ್ಯಾಕೇಜ್ ನೀಡಿದೆ ಎಂದರು.

Last Updated : May 26, 2020, 10:54 PM IST

ABOUT THE AUTHOR

...view details