ನವದೆಹಲಿ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 23ರಂದು ಅಭ್ಯರ್ಥಿಗಳ ಪರ ಮತಯಾಚನೆಗೆ ಬಿಹಾರಕ್ಕೆ ತೆರಳಲಿದ್ದು, ಆ ದಿನ ಎರಡು ಸಭೆ ನಡೆಸಲಿದ್ದಾರೆ.
ಮೊದಲಿಗೆ ಹಿಸುವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನೀತು ಸಿಂಗ್ ಪರ ಸಭೆ ನಡೆಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ 9 ಶಾಸಕರು ಗೆದ್ದು ಕಾಂಗ್ರೆಸ್ಗೆ ಬಲ ನೀಡಿದ್ದರು. ಹಲವು ವರ್ಷಗಳ ಬಳಿಕ ಕಾಂಗ್ರೆಸ್ಗೆ ಇಷ್ಟು ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ ಭುಮಿಹಾರ್ ಸಮುದಾಯದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಇನ್ನೊಂದು ಸಭೆಯನ್ನು ಕಹಲ್ಗಾಂವ್ನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸಿಎಲ್ಪಿ ನಾಯಕ ಸದಾನಂದ್ ಸಿಂಗ್ ಪುತ್ರ ಮುಖೇಶ್ ಸಿಂಗ್ ಟಿಕೆಟ್ ಪಡೆದಿದ್ದಾರೆ.