ಕರ್ನಾಟಕ

karnataka

ETV Bharat / bharat

'ಸ್ಪೀಕ್ ಅಪ್ ಫಾರ್ ಫಾರ್ಮರ್ಸ್' ಅಭಿಯಾನದ ಮೂಲಕ ರೈತರ ಪರವಾಗಿ ಧ್ವನಿ ಎತ್ತೋಣ: ರಾಹುಲ್ ಗಾಂಧಿ - 'ಸ್ಪೀಕ್ ಅಪ್ ಫಾರ್ ಫಾರ್ಮರ್ಸ್' ಅಭಿಯಾನ

'ಸ್ಪೀಕ್ ಅಪ್ ಫಾರ್ ಫಾರ್ಮರ್ಸ್' ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭಿಸಿದ್ದು, "ಮೋದಿ ಸರ್ಕಾರದಿಂದಾಗುತ್ತಿರುವ ರೈತರ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ನಾವು ಒಟ್ಟಾಗಿ ಧ್ವನಿ ಎತ್ತೋಣ" ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

rahul gandhi
rahul gandhi

By

Published : Sep 26, 2020, 5:12 PM IST

ನವದೆಹಲಿ:ಕೃಷಿ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್ 'ಸ್ಪೀಕ್ ಅಪ್ ಫಾರ್ ಫಾರ್ಮರ್ಸ್' ಅಭಿಯಾನವನ್ನು ಪ್ರಾರಂಭಿಸಿದೆ.

ನರೇಂದ್ರ ಮೋದಿ ಸರ್ಕಾರದ ರೈತರ ಶೋಷಣೆಯ ವಿರುದ್ಧವಾಗಿ ಧ್ವನಿ ಎತ್ತಬೇಕೆಂದು ರಾಹುಲ್ ಗಾಂಧಿ ಜನರನ್ನು ಒತ್ತಾಯಿಸಿದ್ದಾರೆ.

ಮೂರು ಮಸೂದೆಗಳನ್ನು ಮಾನ್ಸೂನ್ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿವೆ.

"ಮೋದಿ ಸರ್ಕಾರದಿಂದಾಗುತ್ತಿರುವ ರೈತರ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ನಾವು ಒಟ್ಟಾಗಿ ಧ್ವನಿ ಎತ್ತೋಣ" ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ನಿಮ್ಮ ವೀಡಿಯೊ ಮೂಲಕ ಸ್ಪೀಕ್ ಅಪ್ ಫಾರ್ ಫಾರ್ಮರ್ಸ್ ಅಭಿಯಾನಕ್ಕೆ ಸೇರಿ" ಎಂದು ಅವರು ಹೇಳಿದ್ದು, ಬಿಲ್‌ಗಳನ್ನು ಹಿಂಪಡೆಯಲು ಪಕ್ಷವು ಕರೆ ನೀಡಿದ ವೀಡಿಯೊವನ್ನು ಟ್ಯಾಗ್ ಮಾಡಿದ್ದಾರೆ.

ABOUT THE AUTHOR

...view details