ನವದೆಹಲಿ: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಆರು ಗಂಟೆಗೆ ಮಾತನಾಡುತ್ತಿದ್ದು, ಇದರ ಬೆನ್ನಲ್ಲೇ ರಾಹುಲ್ ಗಾಂಧಿ ನಮೋ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಡಿಯರ್ ಪಿಎಂ, ನಿಮ್ಮ 6 ಗಂಟೆ ಭಾಷಣದಲ್ಲಿ ದಯವಿಟ್ಟು ದೇಶದ ಜನತೆಗೆ ಈ ಮಾಹಿತಿ ತಿಳಿಸಿ ಎಂದಿರುವ ರಾಗಾ, ಭಾರತದ ಭೂಪ್ರದೇಶದಿಂದ ಚೀನಾ ಯಾವಾಗ ಹೊರಹೋಗುತ್ತದೆ ಎಂಬುವುದನ್ನ ದಯಮಾಡಿ ತಿಳಿಸಿ ಎಂದಿದ್ದಾರೆ.