ಕರ್ನಾಟಕ

karnataka

ETV Bharat / bharat

ರಾಮನೆಂದರೆ ಪ್ರೀತಿ, ರಾಮನೆಂದರೆ ಕರುಣೆ, ರಾಮನೆಂದರೆ ನ್ಯಾಯ: ರಾಹುಲ್ ಗಾಂಧಿ - ಅಯೋಧ್ಯೆ ರಾಮ ಮಂದಿರ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

Rahul Gandhi
Rahul Gandhi

By

Published : Aug 5, 2020, 5:09 PM IST

ನವದೆಹಲಿ:ಮರ್ಯಾದಾ ಪುರುಷೋತ್ತಮ ಭಗವಾನ್​ ಶ್ರೀರಾಮ ಸರ್ವೋತ್ತಮ ಮಾನವೀಯ ಗುಣಗಳ ಸ್ವರೂಪ. ರಾಮ ನಮ್ಮ ಹೃದಯದಾಳದಲ್ಲಿ ನೆಲೆನಿಂತಿರುವ ಮಾವನೀಯತೆಯ ಚೈತನ್ಯ ಶಕ್ತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಮ ಪ್ರೀತಿಯ ಪ್ರತೀಕ, ದ್ವೇಷ ಇರುವಲ್ಲಿ ಇರನು. ರಾಮ ಕರುಣೆಯ ಪ್ರತೀಕ, ಕ್ರೌರ್ಯಕ್ಕೆ ಆಸ್ಪದ ನೀಡಲ್ಲ. ರಾಮ ನ್ಯಾಯದ ಪ್ರತೀಕ, ಆತ ಎಂದಿಗೂ ಅನ್ಯಾಯದ ಜೊತೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಬರೆದು ಕೊಂಡಿದ್ದಾರೆ.

ತನ್ನ ಸಹೋದರನ ಟ್ವೀಟ್‌ ಅನ್ನು ಪ್ರಿಯಾಂಕಾ ವಾದ್ರಾ ಗಾಂಧಿ ರಿಟ್ವೀಟ್ ಮಾಡಿದ್ದಾರೆ.

ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕಾಂಗ್ರೆಸ್​​ ಪಕ್ಷದ ಯಾವುದೇ ಮುಖಂಡರಿಗೆ ಆಹ್ವಾನ ನೀಡರಲಿಲ್ಲ.

ABOUT THE AUTHOR

...view details