ನವದೆಹಲಿ: ಭಾರತ- ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
''ಪ್ರಧಾನಿ ಮೋದಿ ಮೌನವೇಕೆ..?'': ರಾಹುಲ್ ಟ್ವೀಟ್ ದಾಳಿ
ಎಲ್ಎಸಿ ಯಲ್ಲಿ ಭಾರತ - ಚೀನಾ ಸಂಘರ್ಷಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ
ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನಲ್ಲಿಇಷ್ಟೆಲ್ಲ ಬೆಳವಣಿಗಗಳು ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿದ್ದಾರೇಕೆ..? ಈ ವಿಚಾರದಲ್ಲಿ ಮಾತನಾಡದೇ ಅವಿತುಕೊಳ್ಳುತ್ತಿರುವುದೇಕೆ..? ನಾವು ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅದರ ಜೊತೆಗೆ ಚೀನಾ ನಮ್ಮ ಸೈನಿಕರನ್ನ ಕೊಲ್ಲಲು ಹಾಗೂ ನಮ್ಮ ಭೂಮಿಯನ್ನು ಅತಿ ಕ್ರಮಿಸಿಕೊಳ್ಳಲು ಎಷ್ಟು ಧೈರ್ಯ ಎಂದು ಚೀನಾದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.