ವಯನಾಡು(ಕೇರಳ):ಐಎಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೇರಳದ ವಯನಾಡಿನಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಾದ ಬಳಿಕ ಅನೇಕ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದ ಮೂವರು ಪತ್ರಕರ್ತರನ್ನ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಗಾಯಗೊಂಡ ಪತ್ರಕರ್ತರನ್ನ ಆ್ಯಂಬುಲೆನ್ಸ್ವರೆಗೂ ಹೊತ್ತೊಯ್ದ ರಾಹುಲ್, ಸಾಥ್ ನೀಡಿದ ಪ್ರಿಯಾಂಕಾ! - ಪ್ರಿಯಾಂಕಾ ಗಾಂಧಿ
ಬೆಳಗ್ಗೆ ಸಹೋದರಿ ಪ್ರಿಯಾಂಕಾ ಜತೆ ಸೇರಿ ಕೇರಳಕ್ಕೆ ಆಗಮಿಸಿದ್ದ ರಾಗಾ, ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ರೋಡ್ನಲ್ಲಿ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ವಾಹನವೊಂದು ಡಿಕ್ಕಿ ಹೊಡೆದಿದೆ.
ಬೆಳಗ್ಗೆ ಸಹೋದರಿ ಪ್ರಿಯಾಂಕಾ ಜತೆ ಸೇರಿ ಕೇರಳಕ್ಕೆ ಆಗಮಿಸಿದ್ದ ರಾಗಾ, ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ರೋಡ್ನಲ್ಲಿ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ವರದಿಗಾಗಿ ಆಗಮಿಸಿದ್ದ ಪತ್ರಕರ್ತರು ಕೆಳಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣ ಕೆಳಗಿಳಿದ ಬಂದ ರಾಹುಲ್ ಹಾಗೂ ಸಹೋದರಿ ಪ್ರಿಯಾಂಕಾ ಅವರಿಗೆ ಸಹಾಯ ಮಾಡಿದ್ದಾರೆ.
ರಾಹುಲ್ ಗಾಂಧಿ ಗಾಯಾಳುಗಳನ್ನ ಸ್ಟ್ರಚ್ಚರ್ ಮೇಲೆ ಮಲಗಿಸಿ ಆ್ಯಂಬುಲೆನ್ಸ್ವರೆಗೆ ಕರೆದುಕೊಂಡು ಹೋದರೆ, ಪ್ರಿಯಾಂಕಾ ಪತ್ರಕರ್ತನೋರ್ವನ ಶೋ ಕೈಯಲ್ಲಿ ಹಿಡಿದುಕೊಂಡು ಹೋಗಿದ್ದಾರೆ. ಇನ್ನು ಕಳೆದ ಮಾರ್ಚ್ 27ರಂದು ಅಪಘಾತವಾಗಿದ್ದ ರಾಹುಲ್ ಗಾಂಧಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.