ತಿರುಪುರ (ತಮಿಳುನಾಡು): ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್ ತಮಿಳುನಾಡಿನ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ರಾಜ್ಯದ ಜನರು ಮತ್ತು ಅಲ್ಲಿನ ಯುವಕರು ನಿರ್ಧರಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ತಮಿಳುನಾಡು ಭವಿಷ್ಯ ಯುವಕರಿಂದ ನಿರ್ಧಾರ, ಆರ್ಎಸ್ಎಸ್ನಿಂದಲ್ಲ": ರಾಹುಲ್ ಗಾಂಧಿ ವಾಗ್ದಾಳಿ
ಆರ್‌ಎಸ್‌ಎಸ್ ತಮಿಳುನಾಡಿನ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ರಾಜ್ಯದ ಜನರು ಮತ್ತು ಅಲ್ಲಿನ ಯುವಕರು ನಿರ್ಧರಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊಂದಲ ಉಂಟಾಗಿದೆ. ಅವರು ತಮಿಳುನಾಡು ಸರ್ಕಾರವನ್ನು 'ಬ್ಲ್ಯಾಕ್ ಮೇಲ್' ಮಾಡುವುದರಿಂದ, ಅವರು ರಾಜ್ಯದ ಜನರನ್ನೂ ನಿಯಂತ್ರಿಸಬಹುದು ಎಂದು ಅವರು ಭಾವಿಸಿದ್ದಾರೆ. ಆದರೆ, ತಮಿಳು ಜನರು ಮಾತ್ರ ತಮಿಳುನಾಡಿನ ಭವಿಷ್ಯವನ್ನು ನಿರ್ಧರಿಸಬಹುದು. ಎಂದಿಗೂ ರಾಜ್ಯದ ಭವಿಷ್ಯವನ್ನು ಆರ್‌ಎಸ್‌ಎಸ್ ನಿರ್ಧರಿಸಲು ಸಾಧ್ಯವಿಲ್ಲ" ಎಂದರು.
ತಮಿಳುನಾಡಿನೊಂದಿಗಿನ ಸಂಬಂಧವು 'ಕುಟುಂಬ ಸಂಬಂಧ' ಎಂದು ರಾಹುಲ್ ಈ ವೇಳೆ ಹೇಳಿದರು. "ನರೇಂದ್ರ ಮೋದಿಯವರು ಭಾರತದ ಅಡಿಪಾಯವನ್ನು ನಾಶಮಾಡಲು ಹೊರಟಿದ್ದಾರೆ. ಇದನ್ನು ನಾವು ಅನುಮತಿಸುವುದಿಲ್ಲ. ರೈತರ ಭವಿಷ್ಯವನ್ನು ಕದಿಯಲು ಮತ್ತು ಕಿತ್ತುಕೊಳ್ಳಲು ಹೋಗುತ್ತಿದ್ದೀರಿ ಎಂದು ಅವರಿಗೆ ತಿಳಿದಿದೆ. ಹಾಗಾಗಿ ರೈತರ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದು ಹೇಳಿದರು.