ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಹೆಚ್ಚಳವಾದಲೂ ಯುಪಿಎ ಸರ್ಕಾರವಿದ್ದಾಗ 2014 ರ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆ ಇದ್ದವು. ಆದರ ಎನ್‌ಡಿಎ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 258.47 ಶೇಕಡಾ ಮತ್ತು ಡೀಸೆಲ್ ಮೇಲಿನ ಶೇಕಡಾ 819.94 ರಷ್ಟು ಹೆಚ್ಚಿಸಿದೆ ಎಂದು ತುಲನ ಮಾಡಿದರು.
ಒಂದು ದಿನ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 48 ಪೈಸೆ ಮತ್ತು ಡೀಸೆಲ್ ಅನ್ನು ಲೀಟರ್‌ಗೆ 23 ಪೈಸೆ ಹೆಚ್ಚಿಸಿವೆ. ಜೂನ್ 7 ರಂದು ತೈಲ ಕಂಪನಿಗಳು ವೆಚ್ಚಗಳಿಗೆ ಅನುಗುಣವಾಗಿ ಪರಿಷ್ಕರಿಸುವ ಬೆಲೆಗಳನ್ನು ಪುನರಾರಂಭಿಸಿದ ನಂತರ ಇದು ಸತತ ಒಂಬತ್ತನೇ ದರ ಹೆಚ್ಚಳವಾಗಿದೆ. "ಲೂಟಿ ಮಾಡುವ ಸರ್ಕಾರಕ್ಕೆ ನಾಚಿಕೆ" ಆಗಬೇಕು ಎಂದು ಕಿಡಿಕಾರಿದರು.
2014 ರ ಮೇ 16 ರಂದು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 107.09 ಡಾಲರ್ ಆಗಿದ್ದರೆ, ಎನ್‌ಡಿಎ ಸರ್ಕಾರದಲ್ಲಿ 2020 ರ ಜೂನ್ 15 ರಂದು ಇದು 40.66 ಡಾಲರ್ ಆಗಿದೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 66.43 ಡಾಲರ್‌ಗಳಷ್ಟು ಕಡಿಮೆ ಇದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈಗ 2014 ಕ್ಕೆ ಹೋಲಿಸಿದರೆ ಹೆಚ್ಚಾಗಿದೆ ಎಂದು ಗಾಂಧಿ ಅಸಮಾಧಾನ ಹೊರಹಾಕಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ತಮ್ಮ ಬೆಲೆಯನ್ನು ತಗ್ಗಿಸಲು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕೆಂದು ವಿರೋಧ ಪಕ್ಷ ಒತ್ತಾಯಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಸರ್ಕಾರವು ಬಡವರ ಜೇಬಿಗೆ ಕತ್ತರಿ ಹಾಕಿದೆ ಎಂದರು.