ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಸುಖದೇವ್ ವಿಹಾರ್ನಲ್ಲಿ ವಲಸೆ ಕಾರ್ಮಿಕರೊಂದಿಗೆ ಇತ್ತೀಚೆಗೆ ನಡೆಸಿದ್ದ ಸಂವಾದವನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೆಲವು ದಿನಗಳ ಹಿಂದೆ ನಾನು ಹರಿಯಾಣದಿಂದ ಉತ್ತರ ಪ್ರದೇಶದ ಝಾನ್ಸಿ ಬಳಿಯ ತಮ್ಮ ಊರಿಗೆ ನೂರಾರು ಕಿಲೋ ಮೀಟರ್ವರೆಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದ ವಲಸೆ ಕಾರ್ಮಿಕರ ಗುಂಪನ್ನು ಭೇಟಿಯಾಗಿದ್ದೆ. ಭಾರಿ ಸಂಕಷ್ಟ ಮತ್ತು ಅನ್ಯಾಯ ಅನುಭವಿಸಿದ ನಮ್ಮ ವಲಸೆ ಸಹೋದರರು ಮತ್ತು ಸಹೋದರಿಯರೊಂದಿಗಿನ ಸಂಭಾಷಣೆ ಇದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.