ಕರ್ನಾಟಕ

karnataka

ಹಿಂಗಾರು ಬೆಳೆ ಕಟಾವಿಗೆ ಅವಕಾಶ ನೀಡಿ; ರಾಹುಲ್ ಗಾಂಧಿ

By

Published : Apr 8, 2020, 6:45 PM IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ರೈತಾಪಿ ವರ್ಗದ ಬೆಂಬಲಕ್ಕೆ ನಿಂತಿದ್ದು, ಹಿಂಗಾರು ಬೆಳೆ ಕಟಾವಿಗೆ ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಗದ್ದೆಗಳಲ್ಲಿ ಬೆಳೆದು ನಿಂತಿರುವ ಫಸಲು ಕಟಾವಿಗೆ ಅವಕಾಶ ನೀಡಿ ಸರ್ಕಾರ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಅವರು ಹೇಳಿದ್ದಾರೆ.

Rahul Gandhi
Rahul Gandhi

ಹೊಸದಿಲ್ಲಿ: ಲಾಕ್​ಡೌನ್​ ಮಧ್ಯೆ ಹಿಂಗಾರು ಬೆಳೆ ಕಟಾವು ಮಾಡಲು ರೈತರಿಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬುಧವಾರ ಕೇಂದ್ರಕ್ಕೆ ಆಗ್ರಹಿಸಿದ್ದಾರೆ.

"ಹಿಂಗಾರು ಬೆಳೆ ಕಟಾವಿಗೆ ಬಂದಿದೆ. ಆದರೆ, ಲಾಕ್​ಡೌನ್​ ಇರುವುದರಿಂದ ಬೆಳೆ ಕಟಾವು ಮಾಡಲು ರೈತರಿಗೆ ಸಮಸ್ಯೆಯಾಗುತ್ತಿದೆ. ಕೋಟ್ಯಂತರ ರೈತರ ಜೀವನೋಪಾಯ ಕುಸಿಯುವ ಹಂತಕ್ಕೆ ಬಂದಿದೆ. ದೇಶಕ್ಕೆ ಅನ್ನ ನೀಡುವ ರೈತನಿಂದು ದುಪ್ಪಟ್ಟು ಕಷ್ಟ ಅನುಭವಿಸಬೇಕಾಗಿ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರದ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಬೆಳೆ ಕಟಾವಿಗೆ ಅನುವು ಮಾಡಿಕೊಡಬೇಕೆಂದು" ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇತರ ದೇಶಗಳಿಗಿಂತ ಭಾರತದ ಸ್ಥಿತಿ ಭಿನ್ನವಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮತೆಯಿಂದ ನಿಭಾಯಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಈ ಮುಂಚೆ ಹೇಳಿದ್ದರು.

ABOUT THE AUTHOR

...view details