ನವದೆಹಲಿ: ಮನಿಲ್ಯಾಂಡ್‌ರಿಂಗ್, ಆದಾಯ ತೆರಿಗೆ ಹಾಗೂ ವಿದೇಶಿ ಕೊಡುಗೆಗಳ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದಡಿ ಗಾಂಧಿ ಕುಟುಂಬ ಸಂಬಂಧಿತ ಟ್ರಸ್ಟ್‌ಗಳ ವಿರುದ್ಧ ಕೇಂದ್ರ ಸರ್ಕಾರ ತನಿಖೆಗೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.
ಗಾಂಧಿ ಕುಟುಂಬದ ಟ್ರಸ್ಟ್‌ಗಳ ವಿರುದ್ಧ ತನಿಖೆ; 'ಸತ್ಯಕ್ಕೆ ಹೋರಾಡುವವರಿಗೆ ಬೆಲೆಯಿಲ್ಲ'- ಮೋದಿಗೆ ರಾಹುಲ್ ಕುಟುಕು - ಕಾಂಗ್ರೆಸ್
ಮಿಸ್ಟರ್ ಮೋದಿ ಅವರು ಜಗತ್ತು ಅವರಂತೆಯೇ ಇದೆ ಎಂದು ನಂಬುತ್ತಾರೆ. ಪ್ರತಿಯೊಬ್ಬರಿಗೂ ಬೆಲೆ ಇದೆ ಅಥವಾ ಬೆದರಿಸಬಹುದು ಎಂದು ಅವರು ಭಾವಿಸುತ್ತಾರೆ..
ಮೋದಿ ರಾಹುಲ್
ಆರ್ಥಿಕ ನಿಬಂಧನೆಗಳು ಉಲ್ಲಂಘಿಸಿದ ಆರೋಪದಡಿ ಸಿಲುಕಿರುವ ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ವಿರುದ್ಧದ ಆರೋಪಗಳ ತನಿಖೆಗೆ ಕೇಂದ್ರ ಸರ್ಕಾರ ಅಂತರ್ ಸಚಿವಾಲಯ ಸಮಿತಿ ರಚಿಸಿದೆ.
ಮಿಸ್ಟರ್ ಮೋದಿ ಅವರು ಜಗತ್ತು ಅವರಂತೆಯೇ ಇದೆ ಎಂದು ನಂಬುತ್ತಾರೆ. ಪ್ರತಿಯೊಬ್ಬರಿಗೂ ಬೆಲೆ ಇದೆ ಅಥವಾ ಬೆದರಿಸಬಹುದು ಎಂದು ಅವರು ಭಾವಿಸುತ್ತಾರೆ. ಸತ್ಯಕ್ಕಾಗಿ ಹೋರಾಡುವವರಿಗೆ ಬೆಲೆ ಇಲ್ಲ ಮತ್ತು ಬೆದರಿಸಲಾಗುವುದಿಲ್ಲ ಎಂಬುದನ್ನು ಅವರೆಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.