ಕರ್ನಾಟಕ

karnataka

ETV Bharat / bharat

ಸುನಾಮಿಯಲ್ಲಿ ಮೀನು ಹಿಡಿಯಲು ಹೋದವರು ಕೊಚ್ಚಿ ಹೋಗ್ತಾರೆ... ದೇಶದ ಆರ್ಥಿಕತೆ ಬಗ್ಗೆ ರಾಗಾ ಎಚ್ಚರಿಕೆ - ಕೊರೊನಾ ವೈರಸ್​​ ಬಗ್ಗೆ ರಾಹುಲ್​​ ಗಾಂಧಿ ಪ್ರತಿಕ್ರಿಯೆ

ಕೊರೊನಾ ವೈರಸ್​​ ಮಾತ್ರವಲ್ಲ, ದೇಶಕ್ಕೆ ಸಮಸ್ಯೆಗಳ ಸುನಾಮಿಯೇ ಬಂದು ಅಪ್ಪಳಿಸಲಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿ ಭವಿಷ್ಯ ನುಡಿದಿದ್ದಾರೆ.

rahul gandhi reaction about Indian economy
ರಾಹುಲ್ ಗಾಂಧಿ ಎಚ್ಚರಿಕೆ

By

Published : Mar 17, 2020, 12:39 PM IST

ನವದೆಹಲಿ: ಭಾರತಕ್ಕೆ ಸಮಸ್ಯೆಗಳ ಸುನಾಮಿ ಅಪ್ಪಳಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಈ ಸಮಸ್ಯೆಗಳ ಅರಿವೇ ಇಲ್ಲ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಎಚ್ಚರಿಕೆ

ಕೊರೊನಾ ವೈರಸ್ ಮಾತ್ರವಲ್ಲದೆ ದೇಶದ ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿಗಳಿಂದ ದೇಶ ಎಂದೂ ಕಾಣದ ಕೆಟ್ಟ ದಿನಗಳನ್ನು ಕಾಣಲಿದೆ. ಮುಂದಿನ ಆರು ತಿಂಗಳಲ್ಲಿ ದೇಶದ ಜನತೆ ತೀವ್ರ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಾನು ಈ ಬಗ್ಗೆ ಪದೇ ಪದೆ ಹೇಳಿದರೂ ಸರಕಾರ ಕೇಳಲು ತಯಾರಿಲ್ಲ ಎಂದು ರಾಹುಲ್ ನುಡಿದರು.

'ಸುನಾಮಿ ಬರುವ ಮುಂಚೆ ಸಮುದ್ರದ ನೀರು ಹಿಂದೆ ಹೋಗುತ್ತದೆ. ಆಗ ಮೀನು ಹಿಡಿಯಲು ಹೋದವರು ಸುನಾಮಿಯ ಹೊಡೆತಕ್ಕೆ ಸಿಲುಕಿ ನೀರು ಪಾಲಾಗುತ್ತಾರೆ' ಎಂದು ರಾಹುಲ್ ದೇಶದ ಪ್ರಸ್ತುತ ಸನ್ನಿವೇಶವನ್ನು ವಿವರಿಸಿದರು.

ABOUT THE AUTHOR

...view details