ತಿರುವನಂತಪುರ: ಭಾರೀ ಮಳೆ ಮತ್ತು ಪ್ರವಾಹದಿಂದ ನಲುಗಿರುವ ಕೇರಳದ ವಯನಾಡ್ ಕ್ಷೇತ್ರಕ್ಕೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.
ಕೇರಳದ ವಯನಾಡ್ ತಲುಪಿದ ರಾಹುಲ್, ನಿರಾಶ್ರಿತ ಶಿಬಿರಗಳಿಗೆ ಭೇಟಿ - ಕೇರಳ ಪ್ರವಾಹ
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮುಂದಿನ ಕೆಲವು ದಿನಗಳ ಕಾಲ ಲೋಕಸಭೆ ಕ್ಷೇತ್ರವಾದ ವಯನಾಡ್ನಲ್ಲಿ ಇರಲಿದ್ದಾರೆ. ವಯನಾಡಿನಾದ್ಯಂತ ಇರುವ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿ ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಅವಲೋಕನ ನಡೆಸಲಿದ್ದಾರೆ.
![ಕೇರಳದ ವಯನಾಡ್ ತಲುಪಿದ ರಾಹುಲ್, ನಿರಾಶ್ರಿತ ಶಿಬಿರಗಳಿಗೆ ಭೇಟಿ](https://etvbharatimages.akamaized.net/etvbharat/prod-images/768-512-4107804-thumbnail-3x2-rahul.jpg)
ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಭೇಟಿ
ಮಲಪ್ಪುರಂನ ನೀಲಂಬೂರದಲ್ಲಿ ಬೂದನಂ ಚರ್ಚ್‌ನಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಭೇಟಿ ನೀಡಿದರು. ಈ ವೇಳೆ ಸಂತ್ರಸ್ತರ ಅಳಲು ಆಲಿಸಿ ಸಾಂತ್ವಾನ ಹೇಳಿದರು.