ನವದೆಹಲಿ: ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಖಾಸಗಿ ಆಪರೇಟರ್‌ಗೆ ಹೊರ ಗುತ್ತಿಗೆ ನೀಡಿದ್ದು, ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಆರೋಗ್ಯ ಸೇತು ಆ್ಯಪ್ ಸುರಕ್ಷತೆ , ಗೌಪ್ಯತೆ ಹೊಂದಿದೆ: ರಾಹುಲ್ ಗಾಂಧಿ ಟ್ವೀಟ್ - ಆರೋಗ್ಯ ಸೇತು ಆ್ಯಪ್
ಆರೋಗ್ಯ ಸೇತು ಆ್ಯಪ್‌ಗೆ ಸಂಬಂಧಿಸಿದಂತೆ ವಿವಿಧ ತಜ್ಞರು ಗೌಪ್ಯತೆಯ ಅನೇಕ ಸಮಸ್ಯೆಗಳನ್ನು ಎತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆ್ಯಪ್ ಸುರಕ್ಷತೆ ಹೊಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್ 19 ಸೋಂಕಿನ ಅಪಾಯವಿದೆಯೇ ಎಂದು ಗುರುತಿಸಲು ಈ ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಕೊರೊನಾ ವೈರಸ್ ಮತ್ತು ಅದರ ರೋಗ ಲಕ್ಷಣಗಳನ್ನು ತಪ್ಪಿಸುವ ಮಾರ್ಗಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಇದು ಜನರಿಗೆ ಒದಗಿಸುತ್ತದೆ. ಆದರೆ, ನಾಗರಿಕರ ಒಪ್ಪಿಗೆ ಇಲ್ಲದೇ ಆ್ಯಪ್ ದುರುಪಯೋಗವಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ.
ಕೇಂದ್ರ ಸರ್ಕಾರ ತನ್ನ ಎಲ್ಲ ಉದ್ಯೋಗಿಗಳಿಗೆ ಆ್ಯಪ್ ಡೌನ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಿದೆ ಮತ್ತು ಖಾಸಗಿ ಅರ್ಹತೆಗಳನ್ನು ಸಹ ತಮ್ಮ ನೌಕರರು ಅದನ್ನು ಬಳಸಲು ಕೇಳಿಕೊಳ್ಳುವಂತೆ ಒತ್ತಾಯಿಸಿದೆ. ಆದರೆ, ಆರೋಗ್ಯ ಸೇತು ಆ್ಯಪ್‌ಗೆ ಸಂಬಂಧಿಸಿದಂತೆ ವಿವಿಧ ತಜ್ಞರು ಗೌಪ್ಯತೆಯ ಅನೇಕ ಸಮಸ್ಯೆಗಳಿರುವುದನ್ನ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದರು. ಅಷ್ಟೇ ಅಲ್ಲ ಮುಂದಿನ 24 ಗಂಟೆಗಳಲ್ಲಿ ನಾವು ಈ ವಿಷಯದ ಬಗ್ಗೆ ಹೆಚ್ಚು ಸಮಗ್ರ ನಿರ್ಣಯಕ್ಕೆ ಬರುತ್ತೇವೆ ಎಂದಿದ್ದಾರೆ.