ನವದೆಹಲಿ:ಬಿಜೆಪಿ - ಆರ್ಎಸ್ಎಸ್ ಟೀಕಿಸಿ ಮಾತನಾಡಿ, ಮಾನನಷ್ಟ ಮೊಕದಮೆ ಎದುರಿಸುತ್ತಿದ್ದ ರಾಹುಲ್ ಗಾಂಧಿ ಅವರಿಗೆ ರಿಲೀಫ್ ಸಿಕ್ಕಿದೆ. ಈ ಸಂಬಂಧ ಅವರಿಗೆ ಮುಂಬೈ ಸ್ಥಳೀಯ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತವೇ ಕಾರಣ ಎಂದು ರಾಹುಲ್ ಆರೋಪಿಸಿದ್ದಕ್ಕೆ ಆರ್ಎಸ್ಎಸ್ ಕಾರ್ಯಕರ್ತರೊಬ್ಬರು ಮಾನನಷ್ಟ ಮೊಕದಮೆ ಹೂಡಿದ್ದರು. ಪ್ರಕರಣ ಕುರಿತಾಗಿ ಇಂದು ಮುಂಬೈ ಕೋರ್ಟ್ಗೆ ಹಾಜರಾಗಿ, ವಿಚಾರಣೆ ಎದುರಿಸಿದ ರಾಹುಲ್, ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.