ನವದೆಹಲಿ:ಭಾರತ-ಚೀನಾ ನಡುವೆ ಲಡಾಖ್‌ನ ಗಾಲ್ವಾನ್ ವ್ಯಾಲಿಯಲ್ಲಿ ಹಿಂಸಾತ್ಮಕ ಸಂಘರ್ಷ ನಡೆದ ಬಳಿಕ ರಾಹುಲ್ ಗಾಂಧಿ ಇದೇ ವಿಷಯವಾಗಿ ಅನೇಕ ಸಲ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ ಅವರು ಮೋದಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಲಡಾಖ್‌ನ ಭೂಭಾಗವನ್ನು ಚೀನಾ ಕಬಳಿಸಿದೆಯೇ?: ವಿಡಿಯೋ ಹರಿಬಿಟ್ಟು ರಾಹುಲ್ ಗಾಂಧಿ ಪ್ರಶ್ನೆ - ಪ್ರಧಾನಿ ನರೇಂದ್ರ ಮೋದಿ
![ಲಡಾಖ್‌ನ ಭೂಭಾಗವನ್ನು ಚೀನಾ ಕಬಳಿಸಿದೆಯೇ?: ವಿಡಿಯೋ ಹರಿಬಿಟ್ಟು ರಾಹುಲ್ ಗಾಂಧಿ ಪ್ರಶ್ನೆ Rahul Gandhi](https://etvbharatimages.akamaized.net/etvbharat/prod-images/768-512-7874327-911-7874327-1593766105267.jpg)
Rahul Gandhi
ಲಡಾಖ್ ಪ್ರದೇಶ ಚೀನಾ ವಶದಲ್ಲಿದೆ ಎಂದು ಅಲ್ಲಿನ ಜನರು ಖುದ್ದಾಗಿ ಹೇಳುತ್ತಿದ್ದಾರೆ. ಆದರೆ ಮೋದಿ ಮಾತ್ರ ಅದು ನಮ್ಮ ನೆಲ, ಯಾರೂ ವಶಪಡಿಸಿಕೊಂಡಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ, ಈ ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದು ಯಾರು? ಎಂದು ರಾಹುಲ್ ಟೀಕಿಸಿದ್ದಾರೆ.
ರಾಹುಲ್ ಗಾಂಧಿ 'ಲಡಾಖ್ ಸ್ಪೀಕ್ಸ್' ಎಂಬ ಶೀರ್ಷಿಕೆಯಡಿ ವಿಡಿಯೋ ಹರಿಬಿಟ್ಟಿದ್ದು, ಅಲ್ಲಿನ ಜನರ ಪರಿಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಲಡಾಖ್ನಲ್ಲಿ ನಿವಾಸಿಗಳೆನ್ನಲಾದ ಜನರು 'ನಮ್ಮನ್ನು ಚೀನಾ ವಶಕ್ಕೆ ನೀಡಬೇಡಿ..' ಎಂದು ಮನವಿ ಮಾಡಿದ್ದಾರೆ.