ಕೊಝಿಕೊಡೆ:ಲೋಕಸಭೆ ಚುನಾವಣೆ ಬಳಿಕ ಕೇರಳಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರಿಗೆ ಇಂದು ಅಚ್ಚರಿ ಕಾದಿತ್ತು! 49 ವರ್ಷಗಳ ನಂತರ ಅವರು ಭೇಟಿ ಮಾಡಿದ ವ್ಯಕ್ತಿ, ನಿಜಕ್ಕೂ ವಿಶೇಷವಾದವರು.
49 ವರ್ಷದ ಹಿಂದೆ ರಾಹುಲ್‌ರನ್ನ ಎತ್ತಿ, ಮುದ್ದಾಡಿದ್ದ ಅಮ್ಮ.. ಅಪರೂಪದ ಅತಿಥಿ ಆಲಿಂಗಿಸಿದ ಅಚ್ಚರಿಯ ಕ್ಷಣ!
49 ವರ್ಷಗಳ ಹಿಂದೆ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರಿಗೆ ಜನ್ಮ ನೀಡಿದ ವೇಳೆ ಅದೇ ಆಸ್ಪತ್ರೆಯಲ್ಲಿದ್ದ, ಪುಟ್ಟ ರಾಹುಲ್ರನ್ನು ಕೈಲಿ ಎತ್ತಿಕೊಂಡಿದ್ದ ಮೊದಲ ನರ್ಸ್ ರಾಜಮ್ಮ ವವತಿಲ್ ಎಂಬುವರನ್ನು ರಾಹುಲ್ ಭೇಟಿ ಮಾಡಿದರು. 72 ವರ್ಷದ ದಾದಿಯನ್ನು ಅಪ್ಪಿಕೊಂಡ ರಾಹುಲ್, ಉಭಯ ಕುಶಲೋಪರಿ ವಿಚಾರಿಸಿದರು.

ಇಂದು ಬೆಳಗ್ಗೆ ಗೆಸ್ಟ್ಹೌಸ್ನಲ್ಲಿ ರಾಜಮ್ಮ ಮತ್ತವರ ಕುಟುಂಬವನ್ನು ಭೇಟಿ ಮಾಡಿದ ರಾಹುಲ್ ಹರ್ಷ ವ್ಯಕ್ತಪಡಿಸಿದರು. ತಮ್ಮ ಬ್ಯುಸಿ ಷೆಡ್ಯೂಲ್ ಮಧ್ಯೆಯೂ, ತಾವು ಜನಿಸಿದಾಗ ಎತ್ತಿಕೊಂಡು ಆರೈಕೆ ಮಾಡಿದ ರಾಜಮ್ಮಳ ಜತೆ ಮಾತನಾಡಿ ಧನ್ಯವಾದ ಹೇಳಿದರು.1970 ಜೂನ್ 19ರಂದು ರಾಹುಲ್ ಜನಿಸಿದ ದೆಹಲಿ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಜಮ್ಮ ತರಬೇತಿ ಪಡೆಯುತ್ತಿದ್ದರು. ಹೆರಿಗೆ ವೇಳೆ ಅಲ್ಲಿಯೇ ಇದ್ದು, ಆಗ ತಾನೆ ಜನಿಸಿದ್ದ ಪುಟ್ಟ ರಾಹುಲ್ರನ್ನು ಕೈಲಿ ಎತ್ತಿಕೊಂಡದ್ದನ್ನು ರಾಜಮ್ಮ ನೆನಪಿಸಿಕೊಂಡರು. ರಾಹುಲ್ ನಗುಮೊಗದಿಂದ ಅವರ ಮಾತನ್ನು ಕೇಳಿಸಿಕೊಂಡರು. ಈ ವೇಳೆ ರಾಹುಲ್ಗೆ ರಾಜಮ್ಮ ತಾವೇ ಮಾಡಿದ ಹಲಸಿನ ಚಿಪ್ಸ್, ಸಿಹಿ ನೀಡಿದರು. ಮತ್ತೊಮ್ಮೆ ಭೇಟಿಯಾಗ್ತೇನೆ ಎಂದು ಹೇಳಿ ರಾಹುಲ್ ಅವರನ್ನು ಬೀಳ್ಕೊಟ್ಟರು.