ಕರ್ನಾಟಕ

karnataka

ETV Bharat / bharat

ಕಾರ್ಮಿಕರ ಸಾವು ಇಡೀ ಜಗತ್ತಿಗೆ ಗೊತ್ತಿದ್ರೂ ಮೋದಿ ಸರ್ಕಾರಕ್ಕೆ ಗೊತ್ತಿಲ್ಲ: ರಾಹುಲ್ ಕಿಡಿ - rahul tweet

ಪ್ರಪಂಚ ವಲಸಿಗ ಕಾರ್ಮಿಕರ ಸಾವನ್ನು ನೋಡಿದ್ದರೂ ಮೋದಿ ನೇತೃತ್ವದ ಸರ್ಕಾರ ಯಾವುದೇ ದಾಖಲೆಗಳಿಲ್ಲ ಎಂದು ಹೇಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

rahul gandhi
ರಾಹುಲ್ ಗಾಂಧಿ

By

Published : Sep 15, 2020, 2:15 PM IST

ನವದೆಹಲಿ:ಲಾಕ್​ಡೌನ್ ವೇಳೆ ವಲಸಿಗ ಕಾರ್ಮಿಕರ ಸಾವು ಹಾಗೂ ಉದ್ಯೋಗ ನಷ್ಟದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರಕ್ಕೆ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಗೊತ್ತಿಲ್ಲ. ಲಾಕ್​ಡೌನ್ ವೇಳೆ ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿದಿಲ್ಲ. ಮೃತಪಟ್ಟವರನ್ನು ಲೆಕ್ಕ ಹಾಕಿದ್ದರೆ ಗೊತ್ತಾಗುತ್ತಿತ್ತು. ಇದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಪ್ರಪಂಚ ವಲಸಿಗರ ಸಾವನ್ನು ನೋಡಿದೆ. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಈ ಸುದ್ದಿ ತಿಳಿಯಲಿಲ್ಲ ಎಂದು ರಾಹುಲ್ ತಮ್ಮ ಟ್ವೀಟರ್ ಖಾತೆಯಲ್ಲಿ ವ್ಯಂಗ್ಯಡಿದ್ದಾರೆ.

ಸಂಸತ್​ನ ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಅಕ್ಟೋಬರ್ 1ಕ್ಕೆ ಕೊನೆಗೊಳ್ಳಲಿದೆ.

ABOUT THE AUTHOR

...view details