ಕರ್ನಾಟಕ

karnataka

ETV Bharat / bharat

ಆ.10ರ ವೇಳೆಗೆ ದೇಶದಲ್ಲಿ 20 ಲಕ್ಷ ಕೊರೊನಾ ಪೀಡಿತರು: ರಾಹುಲ್ ಗಾಂಧಿ ವಾರ್ನಿಂಗ್​​​​​​ - ಭಾರತ ಕೊರೊನಾ ಸುದ್ದಿ

ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 10,00,000( 10 ಲಕ್ಷ) ದಾಟಿದ್ದು, ಆಗಸ್ಟ್ 10ರ ವೇಳೆಗೆ ದೇಶದಲ್ಲಿ 20,00,000ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

rahul gandhi
rahul gandhi

By

Published : Jul 17, 2020, 11:59 AM IST

ನವದೆಹಲಿ:ಭಾರತದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 10,00,000( 10 ಲಕ್ಷ) ದಾಟಿದ್ದು, ಆಗಸ್ಟ್ 10ರ ವೇಳೆಗೆ ದೇಶದಲ್ಲಿ 20,00,000( 20 ಲಕ್ಷ)ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ ಅತಿ ಹೆಚ್ಚು ಅಂದರೆ 32,695 ಪ್ರಕರಣಗಳು ಮತ್ತು 606 ಸಾವು ಸಂಭವಿಸಿವೆ. ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ 3,31,146 ಸಕ್ರಿಯ ಪ್ರಕರಣಗಳಿದ್ದು, 6,12,815 ಚೇತರಿಸಿಕೊಂಡಿದ್ದಾರೆ. ಒಟ್ಟು 24,915 ಸಾವು ಸಂಭವಿಸಿವೆ.

ABOUT THE AUTHOR

...view details