ಕರ್ನಾಟಕ

karnataka

ಕೇಂದ್ರದ ಮಸೂದೆಗಳು ಅದಾನಿ, ಅಂಬಾನಿಯ ಕೃಷಿ ಕಾಯ್ದೆಗಳು: ರಾಹುಲ್​ ವ್ಯಂಗ್ಯ

By

Published : Dec 7, 2020, 7:50 PM IST

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

rahul gandhi
ರಾಹುಲ್ ಗಾಂಧಿ

ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಕೃಷಿ ಸುಧಾರಣಾ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು ಕೃಷಿ ಸುಧಾರಣಾ ಕಾಯ್ದೆಗಳನ್ನು ಅದಾನಿ-ಅಂಬಾನಿ ಕೃಷಿ ಕಾನೂನುಗಳು ಎಂದು ವ್ಯಂಗ್ಯವಾಡಿದ್ದು, ಅವುಗಳನ್ನು ರದ್ದು ಮಾಡುವುದು ಹೊರತುಪಡಿಸಿ ಬೇರೆ ಮಾರ್ಗ ಇಲ್ಲ. ಕೃಷಿ ಕಾಯ್ದೆಗಳ ರದ್ದು ಹೊರತುಪಡಿಸಿ, ಬೇರಾವುದನ್ನೂ ತಾವು ಒಪ್ಪುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಭಾರತ್ ಬಂದ್​: ನಾಳೆ ಏನಿರುತ್ತೆ, ಏನಿರಲ್ಲಾ?

ಮಂಗಳವಾರ ಭಾರತ್ ಬಂದ್ ನಡೆಯಲಿದ್ದು, ಈ ಬಂದ್​ಗೆ ಕಾಂಗ್ರೆಸ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್)​, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್​ವಾದ (ಸಿಪಿಐಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್​​ವಾದ ಮತ್ತು ಲೆನಿನ್​ವಾದ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್​ಎಸ್​ಪಿ), ದ್ರಾವಿಡ ಮುನ್ನೇತ್ರ ಖಳಗಂ (ಡಿಎಂಕೆ), ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಸಮಾಜವಾದಿ ಪಕ್ಷ, ಶಿವಸೇನೆ, ಎನ್​ಸಿಪಿ ಪಕ್ಷಗಳು ಬೆಂಬಲ ಸೂಚಿಸಿವೆ.

ಬಿಜೆಪಿ ಮತ್ತು ಅದರ ಮೈತ್ರಿಕೂಟ ಹೊರತುಪಡಿಸಿ, ಬಹುತೇಕ ಪಕ್ಷಗಳು ರೈತರ ಬೆಂಬಕ್ಕೆ ನಿಂತಿದ್ದು, ಮಂಗಳವಾರ ಬಂದ್ ಯಾವ ರೀತಿ ಇರಲಿದೆ ಎಂದು ಕಾದು ನೋಡಬೇಕಾಗಿದೆ.

ABOUT THE AUTHOR

...view details