ನವದೆಹಲಿ:ದೆಹಲಿ ರೈತರಿಂದ ಆವೃತವಾಗಿದೆ. ಅವರು ನಮಗೆ ಆಹಾರ ನೀಡುವ ಅನ್ನದಾತರು. ಆದರೆ, ದೆಹಲಿಯನ್ನ ಕೋಟೆಯಾಗಿ ಏಕೆ ಪರಿವರ್ತಿಸಲಾಗುತ್ತಿದೆ? ಕೇಂದ್ರ ಸರ್ಕಾರದಿಂದ ಅವರನ್ನ ಬೆದರಿಸುವ, ಹೊಡೆಯುವ ಹಾಗೂ ಕೊಲ್ಲುವ ಯತ್ನ ನಡೆಯುತ್ತಿದೆ. ಸರ್ಕಾರ ಅವರೊಂದಿಗೆ ಏಕೆ ಮಾತನಾಡುತ್ತಿಲ್ಲ. ಮತ್ತು ಸಮಸ್ಯೆ ಬಗೆಹರಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದು, ಈ ಸಮಸ್ಯೆ ದೇಶಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.
ರೈತರ ವಿಚಾವನ್ನಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂದಿ, ಮುಂದಿನ ಎರಡು ವರ್ಷಕ್ಕೆ ಕಾನೂನು ಅಮಾನತಿನಲ್ಲಿಡುವ ಆಫರ್ ಈಗಲೂ ಟೆಬಲ್ ಮೇಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದರ ಅರ್ಥವೇನು? ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕಾಗಿದೆ. ಕೇಂದ್ರ ಸರ್ಕಾರ ರೈತರ ಸಮಸ್ಯೆ ಆಲಿಸಬೇಕು. ಅವರೂ ಎಲ್ಲಿಗೂ ಹೊಗುತ್ತಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ಕೇವಲ ಖಾಸಗೀಕರಣದ ಬಗ್ಗೆ ಮಾತನಾಡುತ್ತಿದೆ. ಇದರಿಂದ ಅವರಿಗೆ ಪ್ರಯೋಜನವಿದೆ. ಉತ್ತಮ ಆರ್ಥಿಕತೆ ಮರು ಪ್ರಾರಂಭ ಮಾಡಬೇಕಾದ್ರೆ ಜನರ ಕೈಯಲ್ಲಿ ಹಣ ನೀಡಬೇಕು. ಆದರೆ, ಕೇಂದ್ರ ಸರ್ಕಾರ ಆ ಕೆಲಸ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.