ಜೈಪುರ (ರಾಜಸ್ಥಾನ):ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಭಾರತೀಯ ಜನತಾ ಪಕ್ಷದ ಮೇಲೆ ಆರೋಪ ಹೊರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ತಕ್ಷಣ ವಿಧಾನಸಭೆ ಅಧಿವೇಶನವನ್ನು ಕರೆಯುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
"ದೇಶದಲ್ಲಿ ಕಾನೂನಿನ ನಿಯಮವಿದೆ. ಸರ್ಕಾರಗಳನ್ನು ರಚಿಸಿ ಬಹುಮತದಿಂದ ನಡೆಸಲಾಗುತ್ತದೆ. ಇದು ರಾಜಸ್ಥಾನದ ಎಂಟು ಕೋಟಿ ಜನರಿಗೆ ಮಾಡಿದ ಅವಮಾನ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ವಿಶ್ವಾಸ ಮತದಾನಕ್ಕಾಗಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ವಿಧಾನಸಭೆ ಅಧಿವೇಶನವನ್ನು ಶೀಘ್ರದಲ್ಲಿ ಕರೆಯಬೇಕೆಂದು ಒತ್ತಾಯಿಸಿರುವ ರಾಹುಲ್, ಇದರಿಂದ ಇಡೀ ದೇಶದ ಮುಂದೆ ಸತ್ಯ ಹೊರಬರಲಿದೆ ಎಂದಿದ್ದಾರೆ.
ಮತ್ತೊಂದೆಡೆ, ರಾಜಸ್ಥಾನದ ಗವರ್ನರ್ ಕಲ್ರಾಜ್ ಮಿಶ್ರಾ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಪತ್ರ ಬರೆದಿದ್ದು, ರಾಜ್ಯದ ಜನರು ರಾಜ ಭವನಕ್ಕೆ ಘೆರಾವ್ (ಮುತ್ತಿಗೆ) ಹಾಕಿದರೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ.
ಗೆಹ್ಲೋಟ್ ಈ ಹಿಂದೆ ರಾಜ್ಯಪಾಲರನ್ನು ಭೇಟಿಯಾಗಿ, ವಿಧಾನಸಭೆಯ ಅಧಿವೇಶನ ಕರೆದು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.