ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ವಿದ್ಯಾರ್ಥಿಗಳ ಮನಗೆಲ್ಲುವಲ್ಲಿ ಸೋತಿದ್ದಾರೆ.
ದೆಹಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ರಾಗಾ ಸಂವಾದ... ಮೋದಿಯೇ ಮೊದಲ ಆಯ್ಕೆ ಎಂದ ಸ್ಟೂಡೆಂಟ್ಸ್! - ರಾಹುಲ್ ಗಾಂಧಿ
ಸಂವಾದದಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ರಾಜಕೀಯವೇ ತುಂಬಿತ್ತು ಎನ್ನುವ ಮಾತನ್ನು ಹಲವಾರು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಇಲ್ಲಿ ರಾಜಕೀಯದ ಅವಶ್ಯಕತೆ ಇರಲ್ಲಿಲ್ಲ ಎನ್ನುವ ಮಾತು ಕೇಳಿ ಬಂದಿವೆ.
ರಾಹುಲ್ ಗಾಂಧಿ
ಸಂವಾದದಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದನೆ ನೀಡಿದ್ದು, ಆದರೆ ತಮಗೆ ಇದು ಉತ್ತಮ ಸಂವಾದ ಕಾರ್ಯಕ್ರಮ ಎಂದೆನಿಸಲಿಲ್ಲ ಎಂದು ನಂತರದಲ್ಲಿ ಹೇಳಿಕೊಂಡಿದ್ದಾರೆ.
ಸಂವಾದದ ವೇಳೆ ಮುಂದಿನ ಪ್ರಧಾನಿ ಮೋದಿಯೇ ಆಗಬೇಕು ಎನ್ನುವ ಮಾತನ್ನು ವಿದ್ಯಾರ್ಥಿಗಳು ಹೇಳಿದ್ದಾರೆ. ಮೋದಿ ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಹೀಗಾಗಿ ಮೋದಿಯೇ ಮುಂದಿನ ಪ್ರಧಾನಿ ಪಟ್ಟಕ್ಕೆ ನಮ್ಮ ಆಯ್ಕೆ ಎಂದಿದ್ದಾರೆ.