ಕರ್ನಾಟಕ

karnataka

ETV Bharat / bharat

ಪ್ರಯಾಣಕ್ಕೆ ವಿಶೇಷ ವಿಮಾನ ಖರೀದಿ: ಪಿಎಂಗೆ ತಮ್ಮ ಬಗ್ಗೆ ಮಾತ್ರ ಕಾಳಜಿ ಹೊರತು ಸೈನಿಕರ ಬಗ್ಗೆ ಅಲ್ಲ: ರಾಹುಲ್ ವ್ಯಂಗ್ಯ​! - ಏರ್ ಇಂಡಿಯಾ ಒನ್​​ ಖರೀದಿ ರಾಹುಲ್​ ವಾಗ್ದಾಳಿ

ಪ್ರಧಾನಿ ನರೇದ್ರ ಮೋದಿ ಐಷಾರಾಮಿ ವಿಮಾನ ಖರೀದಿ ವಿಚಾರವಾಗಿ ರಾಹುಲ್​​ ಗಾಂಧಿ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದ್ದಾರೆ.

Rahul Gandhi
Rahul Gandhi

By

Published : Oct 8, 2020, 9:13 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಐಪಿಗಳ ಪ್ರಯಾಣಕ್ಕಾಗಿ ಹೊಸ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಏರ್​ ಇಂಡಿಯಾ ಒನ್​ ಖರೀದಿ ಮಾಡಲಾಗಿದ್ದು, ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸಾವಿರಾರು ಕೋಟಿ ರೂ. ಖರ್ಚು ಮಾಡುವ ಮೂಲಕ ವಿವಿಐಪಿ ವಿಮಾನ ಖರೀದಿ ಮಾಡಲಾಗಿದ್ದು, ಇದರಿಂದ ಗೊತ್ತಾಗುತ್ತದೆ ಪ್ರಧಾನಿ ಮೋದಿಗೆ ತಮ್ಮ ಬಗ್ಗೆ ಮಾತ್ರ ಕಾಳಜಿ ಎಂಬುದು ಎಂದಿದ್ದಾರೆ. ಸುಮಾರು 8,400 ಕೋಟಿ ರೂ. ವೆಚ್ಚದಲ್ಲಿ ಸಿಯಾಚಿನ್​- ಲಡಾಖ್​​ ಯೋಧರಿಗಾಗಿ ಅನೇಕ ಪರಿಕರ ಖರೀದಿ ಮಾಡಬಹುದಾಗಿತ್ತು ಎಂದಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್​ ಗಾಂಧಿ, ಯೋಧರಿಗಾಗಿ ಬೆಚ್ಚಗಿನ ಬಟ್ಟೆ: 30,00,000. ಜಾಕೆಟ್, ಕೈಗವಸುಗಳು: 60,00,000. ಶೂಗಳು: 67,20,000 ಆಕ್ಸಿಜನ್ ಸಿಲಿಂಡರ್: 16,80,000, ಖರೀದಿ ಮಾಡಬಹುದಾಗಿತ್ತು ಎಂದಿದ್ದಾರೆ. ಕೃಷಿ ಮಸೂದೆ ಬಿಲ್​ ವಿರುದ್ಧ ಪಂಜಾಬ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೂಡ ಇದೇ ವಿಚಾರವಾಗಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಪಂಜಾಬ್​​ನಲ್ಲಿ ತಾವು ಪ್ರತಿಭಟನೆ ನಡೆಸಿದ್ದ ವೇಳೆ ಟ್ರ್ಯಾಕ್ಟರ್​ನಲ್ಲಿ ಐಶಾರಾಮಿ ಸೀಟಿನ ಮೇಲೆ ಕುಳಿತಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ತಮಗಾಗಿ ಇಷ್ಟೊಂದು ಸಾವಿರ ಕೋಟಿ ಖರ್ಚು ಮಾಡಿ ವಿಮಾನ ಖರೀದಿ ಮಾಡಿರುವಾಗ ನಾವು ಇಷ್ಟೊಂದು ಸಣ್ಣ ಪ್ರಮಾಣದ ಸೀಟಿನ ಮೇಲೆ ಕುಳಿತುಕೊಳ್ಳಬಾರದೇ? ಎಂದು ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details