ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ಭರ್ಜರಿಯಾಗಿ ಪ್ರಚಾರ ಸಭೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ರಫೇಲ್ ಕುರಿತು ಧ್ವನಿಯೆತ್ತಿದ್ದಾರೆ.
ಮತ್ತೆ ರಫೇಲ್ ಬಗ್ಗೆ ಧ್ವನಿ ಎತ್ತಿದ ರಾಹುಲ್ ಗಾಂಧಿ: ಬಿಜೆಪಿ ವಿರುದ್ಧ ವಾಗ್ದಾಳಿ - Rahul gandhi raise voice about Rafale deal
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಎಲ್ಲಾ ಭಾರತೀಯರಿಗೆ ತಿಳಿದಿದೆ. ಈ ಒಪ್ಪಂದದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಮುಂಬೈನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಇಡೀ ಭಾರತಕ್ಕೆ ತಿಳಿದಿದೆ. ಈ ಒಪ್ಪಂದದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಸ್ಪಷ್ಟವಾಗಿ ಬರೆದಿದ್ದಾರೆ. ಹೀಗಾಗಿಯೇ ಇದರಲ್ಲಿ ಲೋಪವಿದೆ. ರಫೇಲ್ ಎಂಬ ಹೆಸರು ಅವರ ಮನಸ್ಸಿಗೆ ನೋವುಂಟುಮಾಡುತ್ತದೆ. ಇದೇ ಕಾರಣದಿಂದಾಗಿ ರಾಜನಾಥ್ ಸಿಂಗ್ ಅವರು ಫ್ರಾನ್ಸ್ಗೆ ಹೋಗಿ ರಫೇಲ್ ಯುದ್ಧ ವಿಮಾನ ಸ್ವೀಕಾರ ಮಾಡಿದರು ಎಂದು ರಾಗಾ ಆರೋಪಿಸಿದ್ದಾರೆ.
ಸತ್ಯದಿಂದ ಯಾರೊಬ್ಬರೂ ಪಾರಾಗಲು ಸಾಧ್ಯವಿಲ್ಲ. ಅದು ನರೇಂದ್ರ ಮೋದಿ ಇರಲಿ, ಅಮಿತ್ ಶಾ ಇರಲಿ ಅಥವಾ ಯಾವೊಬ್ಬ ನಾಯಕನೇ ಇರಲಿ. ಸತ್ಯದಿಂದ ದೂರ ಓಡಿ ಹೋಗಲು ಸಾಧ್ಯವಿಲ್ಲ. ಅದು ಅವರನ್ನು ಹಿಡಿದಿಡುತ್ತದೆ ಎಂದು ಹೇಳಿದರು.