ನವದೆಹಲಿ :ನೂತನ ಕೃಷಿ ಮಸೂದೆಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಕಾಂಗ್ರೆಸ್ ತನ್ನ ಧ್ವನಿಯನ್ನು ಹೆಚ್ಚಿಸಿದೆ. ಈ ಹೊಸ ಕಾಯ್ದೆಗಳ ಸಹಾಯದಿಂದ ಪ್ರಧಾನಿ ಮೋದಿ ತನ್ನ ಬಂಡವಾಳಶಾಹಿ ಮಿತ್ರರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿ ಟ್ವೀಟ್ ಮಾಡಿದ್ದಾರೆ.
ಕೃಷಿ ಕಾಯ್ದೆಗಳಿಂದ ಬಂಡವಾಳಶಾಹಿ ಮಿತ್ರರಿಗೆ ಪ್ರಧಾನಿ ಮೋದಿ ನೆರವು : ರಾಹುಲ್ ಗಾಂಧಿ ಆರೋಪ - ನೂತನ ಕೃಷಿ ಕಾಯ್ದೆಗಳು
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಕೃಷಿ ಸಂಬಂಧಿತ ಕಾಯ್ದೆಗಳ ಮೂಲಕ ಬಂಡವಾಳಶಾಹಿ ಮಿತ್ರರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ..
ನೂತನ ಕೃಷಿ ಕಾಯ್ದೆಗಳಿಂದ ಪ್ರಧಾನಿ ಮೋದಿ ಬಂಡವಾಳಶಾಹಿ ಮಿತ್ರರಿಗೆ ನೆರವು : ರಾಹುಲ್ ಆರೋಪ
2014ರ ಚುನಾವಣೆ ಸಮಯದಲ್ಲಿ ಸ್ವಾಮಿನಾಥನ್ ಆಯೋಗ ನೀಡಿದ್ದ ಎಂಎಸ್‌ಪಿಯನ್ನು ರದ್ದು ಮಾಡುವುದಾಗಿ ಹೇಳಿದ್ದರು. ಆದರೆ, 2015ರಲ್ಲಿ ರದ್ದು ಮಾಡುವುದಿಲ್ಲ ಎಂದು ಕೋರ್ಟ್‌ಗೆ ಹೇಳಿದ್ದರು. 2020ರಲ್ಲಿ ಕೃಷಿ ಕ್ಷೇತ್ರಕ್ಕೆ ಕಳಂಕವಾಗಿರುವ ನೂತನ ಕಾಯ್ದೆಗಳ ಜಾರಿಗೆ ತರುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಕೂಡ ಇದೇ ವಿಚಾರ ಸಂಬಂಧ ಟ್ವೀಟ್ ಮಾಡಿ, ಒನ್ ನೇಷನ್ ಒನ್ ಮಾರ್ಕೇಟ್ ತಮ್ಮ ಉದ್ದೇಶ ಎಂದು ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿದರು.