ಕರ್ನಾಟಕ

karnataka

ETV Bharat / bharat

9 ನಿಮಿಷದಲ್ಲಿ 1ಕೆಜಿ ಚಿಕನ್​ ಬಿರಿಯಾನಿ ತಿಂದು ತೇಗಿದ ತಮಿಳುನಾಡಿದ ಭೂಪ.. - ಮರಿನಾ ರೆಸ್ಟೋರೆಂಟ್

ತಮಿಳುನಾಡಿನ ಎರೋಡ ಜಿಲ್ಲೆಯ ಮರಿನಾ ರೆಸ್ಟೋರೆಂಟ್​ನಲ್ಲಿ ನಡೆಸಿದ ಚಿಕನ್​ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ರಘುಲ್​ ಎಂಬ ಸ್ಪರ್ಧಿ 9 ನಿಮಿಷದಲ್ಲಿ ತಿಂದು ಮುಗಿಸಿ, ಪ್ರಥಮ ಬಹುಮಾನ ಪಡೆದಿದ್ದಾರೆ.

ಚಿಕನ್​ ಬಿರಿಯಾನಿ ಸ್ಪರ್ಧೆ

By

Published : Sep 1, 2019, 3:40 PM IST

ತಮಿಳುನಾಡು:ರಘುಲ್​ ಎಂಬಾತ ಕೇವಲ 9 ನಿಮಿಷದಲ್ಲಿ ಬರೋಬ್ಬರಿ 1 ಕೆಜಿ ಚಿಕನ್​ ಬಿರಿಯಾನಿ, ಒಂದು ಮೊಟ್ಟೆ ಸೇರಿದಂತೆ ಚಿಕನ್​ ಪೀಸ್​ಗಳನ್ನು ತಿಂದು ಮುಗಿಸಿದ್ದಾರೆ.

ಚಿಕನ್​ ಬಿರಿಯಾನಿ ತಿನ್ನುವ ಸ್ಪರ್ಧೆ..

ಎರೋಡ ಜಿಲ್ಲೆಯ ಪೆರುಂದುರೈನ ಮರಿನಾ ರೆಸ್ಟೋರೆಂಟ್​ ಈ ಚಿಕನ್​ ಬಿರಿಯಾನಿ ಸ್ಪರ್ಧೆ ಆಯೋಜಿಸಿತ್ತು. ಫೇಸ್​ಬುಕ್​ ಮೂಲಕ ಮಹಿಳೆಯರು ಸೇರಿದಂತೆ 500 ಜನರು ನೋಂದಣಿ ಮಾಡಿಸಿದ್ದರು.ಅದರಲ್ಲಿ ಮಹಿಳೆಯರನ್ನು ಸೇರಿದಂತೆ 25 ಜನರನ್ನು ಆಯ್ಕೆ ಮಾಡಲಾಗಿತ್ತು. ರಘುಲ್​ ಕಡಿಮೆ ಸಮಯದಲ್ಲಿ ತಿಂದು ಮುಗಿಸಿ, ₹5 ಸಾವಿರ ಬಹುಮಾನವನ್ನೂ ಗೆದ್ದುಕೊಂಡಿದ್ದಾರೆ. ಎರಡನೇ ಬಹುಮಾನವಾಗಿ ₹ 3 ಸಾವಿರ, ಮೂರನೇ ಬಹುಮಾನವಾಗಿ ₹ 2 ಸಾವಿರ ನೀಡಲಾಗಿದೆ.

ABOUT THE AUTHOR

...view details