ಕರ್ನಾಟಕ

karnataka

ETV Bharat / bharat

ವಾಯುಪಡೆಗೆ ಆನೆ ಬಲ: ಅಂಬಾಲಕ್ಕೆ ಬಂದಿಳಿದ ಡಸಾಲ್ಟ್​ ರಫೇಲ್ ಯುದ್ಧ ವಿಮಾನಗಳ​ ವಿಶೇಷತೆಯೇನು? - ಪೈಲಟ್​ಗಳಿಗೆ ಸ್ಪೆಷಲ್​ ಟ್ರೈನಿಂಗ್

ಫ್ರಾನ್ಸ್​ ನಿರ್ಮಿತ ರಫೇಲ್ ಜೆಟ್​ ವಿಮಾನಗಳು ಹರಿಯಾಣದ ಅಂಬಾಲಾಗೆ ಆಗಮಿಸಿದ್ದು, ಇವುಗಳ ಬಹುಕೌಶಲ್ಯ ವಾಯುಸೇನೆಗೆ ಆನೆ ಬಲ ತಂದು ಕೊಡಲಿದೆ.

raffale
ಡಸಾಲ್ಟ್​ ರಫೇಲ್​

By

Published : Jul 29, 2020, 2:41 PM IST

Updated : Jul 29, 2020, 3:21 PM IST

ನವದೆಹಲಿ: ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್​ ಯುದ್ಧ ವಿಮಾನಗಳಿಗಿದೆ. ಏರ್​​ ಟು ಏರ್​ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ ಏರ್​ ಟು ಅರ್ತ್​ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ ನೈಪುಣ್ಯವನ್ನು ಈ ಸಮರ ವಿಮಾನಗಳು ಹೊಂದಿವೆ.

ಎಂತಹ ಹವಾಮಾನದಲ್ಲೂ ಇವು ಶತ್ರು ಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಕಣ್ಣಿಗೆ ಕಾಣಿಸದಷ್ಟು ದೂರದಿಂದ ಅಟ್ಯಾಕ್​ ಮಾಡಬಲ್ಲ ಶಕ್ತಿ ರಫೇಲ್​ ಯುದ್ಧ ವಿಮಾನಗಳದ್ದು. ಈ ಯುದ್ಧ ವಿಮಾನಗಳನ್ನು ಚಲಾಯಿಸುವ ಜೊತೆಗೆ ತಾಂತ್ರಿಕ ಕೆಲಸಗಳನ್ನು ನಿರ್ವಹಿಸಲು ಪೈಲಟ್​ಗಳು ವಿಶೇಷ ಪರಿಣತಿ ಹೊಂದಿರಬೇಕು.

ಇದಕ್ಕಾಗಿ ಪೈಲಟ್​ಗಳಿಗೆ ಸ್ಪೆಷಲ್​ ಟ್ರೈನಿಂಗ್​ ಕೂಡ ನೀಡಲಾಗುತ್ತದೆ. ಫ್ರಾನ್ಸ್​ನಿಂದ ಇಂದು ಭಾರತಕ್ಕೆ ಬಂದ ರಫೇಲ್​ ಯುದ್ಧ ವಿಮಾನವನ್ನು ಚಾಲನೆ ಮಾಡಿದವರ ಪೈಕಿ ವಿಜಯಪುರದ ಸೈನಿಕ ಶಾಲೆಯಲ್ಲಿ ಕಲಿತ ಕನ್ನಡಿಗ ಅರುಣ್ ಕುಮಾರ್ ಕೂಡಾ ಒಬ್ಬರಾಗಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

Last Updated : Jul 29, 2020, 3:21 PM IST

ABOUT THE AUTHOR

...view details