ನವದೆಹಲಿ: ಫ್ರಾನ್ಸ್ನಿಂದ ಕಳೆದ ಸೋಮವಾರ ಹೊರಟಿದ್ದ ಐದು ರಫೇಲ್ ಯುದ್ಧ ವಿಮಾನಗಳು ಕೊನೆಗೂ ಭಾರತ ತಲುಪಿವೆ. ಹರ್ಯಾಣದ ಅಂಬಾಲದ ವಾಯುನೆಲೆಗೆ ಬಂದಿಳಿಯುವ ಮೂಲಕ ಭಾರತೀಯ ವಾಯುಪಡೆ ಇತಿಹಾಸದಲ್ಲಿ ಹೊಸದೊಂದು ಶಕೆ ಆರಂಭಗೊಂಡಿದೆ.
ಈ ಕುರಿತು ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ಪ್ರತಿಕ್ರಿಯಿಸಿದ್ದು, ರಫೇಲ್ ಯುದ್ಧ ವಿಮಾನದ ಮುಂದೆ ಚೀನಾದ ಜೆ-20 ಯುದ್ಧವಿಮಾನ ಸರಿಸಮವಲ್ಲ. ರಫೇಲ್ ಹತ್ತಿರ ಬರಲೂ ಸಹ ಅದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಧನೋವಾ ಖಾಸಗಿ ಸುದ್ದಿವಾಹಿನಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಚೀನಾದಲ್ಲಿಯೇ ನಿರ್ಮಾಣಗೊಂಡಿರುವ ಜೆ-20 ಯುದ್ಧ ವಿಮಾನಕ್ಕೆ ಇದೀಗ ರಫೇಲ್ ಹಾಗೂ Su-30MKI ಪ್ರತ್ಯುತ್ತರ ನೀಡುವ ಸಾಮರ್ಥ್ಯ ಹೊಂದಿವೆ.
ಫ್ರಾನ್ಸ್ನ ಡಸಾಲ್ಟ್ ಸಂಸ್ಥೆಯಲ್ಲಿ ನಿರ್ಮಿಸಿರುವ ರಫೇಲ್ ಈಗಾಗಲೇ ಅಫ್ಘಾನಿಸ್ತಾನ, ಲಿಬಿಯಾ, ಮಾಲಿ, ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ಯುದ್ಧ ವಿಮಾನವಾಗಿ ಬಳಕೆಯಾಗಿದೆ. ಆದರೆ ಜೆ-20 ನೈಜ ಸಾಮರ್ಥ್ಯದ ಪ್ರದರ್ಶನ ಇಲ್ಲಿಯವರೆಗೆ ಆಗಿಲ್ಲ ಎಂದು ಅವರು ವಿವರಿಸಿದರು.