ಈಟಿವಿ ಭಾರತ್ ಜತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಈ ವಿಚಾರವನ್ನು ಪ್ರಸ್ತಾಪಿಸದರು. ಪ್ರಸ್ತುತ ಪ್ರಕರಣದಲ್ಲಿ, ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬಂಡಾಯ ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಅನ್ನು ವಿಚಾರಣೆಗೆ ಪರಿಗಣಿಸಲು ಅವಕಾಶ ನೀಡಿರುವುದು ಮತ್ತು ಶಾಸಕರ ಮನವಿಯನ್ನು ಆಲಿಸಲು ನಿರ್ಧರಿಸಿದೆ. ಶಾಸಕರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಗೈರು ಹಾಜರಾದ ಹಿನ್ನೆಲಯಲ್ಲಿ ಸ್ಪೀಕರ್ ಅವರಿಗೆ ನೋಟಿಸ್ ನೀಡಿದ್ದರು.
ಜುಲೈ 15 ರಂದು, ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು 18 ಕಾಂಗ್ರೆಸ್ ಶಾಸಕರಿಗೆ ಜೈಪುರದಲ್ಲಿ ನಡೆದ ಪಕ್ಷದ ಶಾಸಕಾಂಗ ಸಭೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದರು. ಈ ಸಭೆಯನ್ನು ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಬೆಂಬಲ ದೃಢೀಕರಿಸಲು ಕರೆಯಲಾಗಿತ್ತು.
ಸಂವಿಧಾನದ 10 ನೇ ಪರಿಛೇದದ ಪ್ರಕಾರ ಸ್ಪೀಕರ್ ಬಂಡಾಯ ಕಾಂಗ್ರೆಸ್ ಶಾಸಕರಿಗೆ ನೋಟಿಸ್ ನೀಡಿದ್ದರು ಮತ್ತು ಈ ನಿಯಮಗಳನ್ನು ಸಂಸತ್ತು ಅಂಗೀಕರಿಸಿದೆ. ಈ ನಿಯಮಗಳ ಅನುಸಾರ, ಅರ್ಜಿದಾರನು ಗೈರು ಹಾಜರಾದ ಬಗ್ಗೆ ಸಮರ್ಪಕವಾದ ಉತ್ತರ ನೀಡಬೇಕೇ ಹೊರತು, ಅದು ಸ್ಪೀಕರ್ ಕೆಲಸ ಅಲ್ಲ ” , ಎಂದು ಪಿಡಿಟಿ ಆಚಾರಿ ಹೇಳಿದರು.
1992 ರಲ್ಲಿ ಕಿಹೊಟೊ ಹೊಲೊಹನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಬಂಡಾಯ ಶಾಸಕರಿಗೆ ನೋಟಿಸ್ ನೀಡುವ ಸ್ಪೀಕರ್ ಅಧಿಕಾರವನ್ನು ಎತ್ತಿ ಹಿಡಿದಿತ್ತು ಎಂದು ಆಚಾರಿ ಸ್ಪರಿಸಿದರು. ಅಲ್ಲದೆ ಸ್ಪೀಕರ್ ನಿರ್ಧಾರದ ನಂತರವೆ ಅದು ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ ಹೊರತು ಅದಕ್ಕೆ ಪೂರ್ವದಲ್ಲಿ ನ್ಯಾಯಂಗ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೊರ್ಟ್ ನ ಸಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.
" ಈ ಕುರಿತು 1992ರಲ್ಲಿಯೇ ಕಾನೂನುನಲ್ಲಿ ಸ್ಪಷ್ಟಪಡಿಸಲಾಗಿದೆ. ಸ್ಪೀಕರ್ ಅವರು ಅರ್ಜಿಯ ಅರ್ಹತೆಯ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನವೇ ನ್ಯಾಯಂಗ ಹಸ್ತಕ್ಷೇಪ ಮಾಡುವಂತಿಲ್ಲಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ”, ಆಚಾರಿ ಇಟಿವಿ ಭಾರತ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.
ರಾಜಸ್ಥಾನದಲ್ಲಿ, ಹೈಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿದೆ, ಇದರರ್ಥ ಸಚಿನ್ ಪೈಲಟ್ ಕ್ಯಾಂಪಿನಲ್ಲಿ ಗುರುತಿಸಿಕೊಂಡಿರುವ ಬಂಡಾಯ ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳುವುದನ್ನು ಸ್ಥಗಿತಗೊಳಿಸಿದಂತಾಗಿದೆ.
ಅಲ್ಲದೆ ರಾಜಸ್ಥಾನ ಹೈಕೋರ್ಟ್ ಸಚಿನ್ ಪೈಲಟ್ ಬಣದ ಇನ್ನೊಂದು ಮನವಿಯನ್ನು ಪುರಸ್ಕರಿಸಿದೆ. ಇದು ಸಂವಿಧಾನದ ನಡವಳಿಗೆ ಸಂಬಂಧಿಸಿದ ಮತ್ತು 1985 ರ ಪಕ್ಷಾಂತರ ವಿರೋಧಿ ಕಾನೂನಿಗೆ ಸಂಬಂಧಿಸಿದ ಪ್ರಮುಖ ಪ್ರಕರಣವಾಗಿರುವುದರಿಂದ ಕೇಂದ್ರ ಸರ್ಕಾರವನ್ನುಈ ಪ್ರಕರಣದಲ್ಲಿ ಅರ್ಜಿದಾರರನ್ನಾಗಿ ಸೇರಿಸಬೇಕೆಂಬ ಪೈಲಟ್ ಬಣದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
" ಈ ಮಧ್ಯಂತರ ತೀರ್ಪಿನ ಅರ್ಥ, ನೀವು ಸ್ಪೀಕರ್ ನೋಟಿಸ್ ನೀಡುವ ನಿರ್ಧಾರವನ್ನು ಪ್ರಶ್ನಿಸಬಹುದು, ನೋಟಿಸ್‌ನ ಸಾಂವಿಧಾನಿಕತೆಯನ್ನು ಕೂಡ ಪ್ರಶ್ನಿಸಬಹುದು" ಎಂದು ಹೈಕೋರ್ಟ್‌ನ ತೀರ್ಪಿನ ಕುರಿತು ಆಚಾರಿ ವಿಶ್ಲೇಷಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹತೆ
ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಎರಡು ವಿಚಾರಗಳ ಆಧಾರದಲ್ಲಿ ಸ್ಪೀಕರ್ ನೋಟಿಸ್ ನೀಡಬಹುದು ಎಂದು ಆಚಾರಿ ತಿಳಿಸಿದರು. ಮೊದಲನೆಯದಾಗಿ ಶಾಸಕರೊಬ್ಬರು ಪಕ್ಷ ನೀಡಿರುವ ವಿಪ್ ಅನ್ನು ಉಲ್ಲಂಘಿಸಿದಾಗ ಹಾಗೂ ಎರಡನೇದಾಗಿ ವಿಧಾನಸಭೆ ಸದಸ್ಯರೊಬ್ಬರು ಐಚ್ಚಿಕವಾಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಸ್ಪೀಕರ್ ನೋಟಿಸ್ ನೀಡಬಹುದಾಗಿದೆ.
"ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ಬಿಟ್ಟು ಕೊಡುವ ಕುರಿತು 10ನೇ ಪರಿಚೇಧದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ , ಆದರೆ ಸುಪ್ರೀಂ ಕೋರ್ಟ್ ಇದನ್ನು ಅನೇಕ ಪ್ರಕರಣಗಳಲ್ಲಿ ವಿವರಿಸಿದೆ" ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಹೇಳಿದರು.
"ಒಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ , ಒಬ್ಬ ಸದಸ್ಯ ಕೆಲವು ವಿರೋಧ ಪಕ್ಷದ ಸದಸ್ಯರೊಂದಿಗೆ ರಾಜ್ಯಪಾಲರ ಬಳಿಗೆ ಹೋಗುವುದು ಮತ್ತು ತನ್ನದೇ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ವಿನಂತಿಸಿದರೆ ಅವರು ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿರುವುದಕ್ಕೆ ಸಾಕಷ್ಟು ಪುರಾವೆಗಳಿದಂತೆ" ಎಂದು ಆಚಾರಿ ವಿವರಿಸಿದರು. ಸದಸ್ಯರ ಈ ನಡೆಯನ್ನು ಸಾಕಷ್ಟು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು ಎಂದು ಆಚಾರಿ ಹೇಳುತ್ತಾರೆ.
ಸ್ಪೀಕರ್ ಅನರ್ಹತೆ ನೋಟಿಸ್ ಹೇಗೆ ನೀಡುತ್ತಾರೆ
ಸದಸ್ಯರ ಅನರ್ಹತೆಗಾಗಿ ಅರ್ಜಿಯನ್ನು ಸಲ್ಲಿಸಿದ ನಂತರ, ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಸ್ಪೀಕರ್ ವಿಧಾನಸಭೆಯ ಸದಸ್ಯನಿಗೆ ನೋಟಿಸ್ ನೀಡಬಹುದಾಗಿದೆ ಎಂದು ಆಚಾರಿ ತಿಳಿಸಿದರು.