ಕರ್ನಾಟಕ

karnataka

ETV Bharat / bharat

'ಸಿಬ್ಬಂದಿ ಜೊತೆ ಸಹಕರಿಸದಿದ್ದರೆ ಕ್ವಾರಂಟೈನ್​ ಕೇಂದ್ರವನ್ನು ತಾತ್ಕಾಲಿಕ ಜೈಲುಗಳಾಗಿ ಘೋಷಣೆ' - ಹಿಮಂತ ಬಿಸ್ವಾ ಶರ್ಮಾ

ಸಿಬ್ಬಂದಿಗೆ ಸಹಕಾರ ನೀಡಿದಿದ್ದರೆ ಕ್ವಾರಂಟೈನ್​ ಕೇಂದ್ರಗಳನ್ನು ತಾತ್ಕಾಲಿಕ ಜೈಲುಗಳಾಗಿ ಘೋಷಣೆ ಮಾಡಲಾಗುವುದು ಎಂದು ಅಸ್ಸೋಂ ಆರೋಗ್ಯ ಸಚಿವರು ಹೇಳಿದ್ದಾರೆ.​

Himanta Biswa Sarma
ಹಿಮಂತ ಬಿಸ್ವಾ ಶರ್ಮಾ

By

Published : Apr 23, 2020, 11:10 AM IST

ಗುವಾಹಟಿ(ಅಸ್ಸೋಂ): ಸಾರುಸಜೈ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಂಕಿತರು ಅಧಿಕಾರಿಗಳಿಗೆ ಸಹಕರಿಸದಿದ್ದರೆ ತಾತ್ಕಾಲಿಕ ಜೈಲಾಗಿ ಪರಿವರ್ತಿಸಲಾಗುವುದು ಎಂದು ಅಸ್ಸೋಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಸೌಲಭ್ಯದ ಕೊರತೆ ಬಗ್ಗೆ ಫೇಸ್​​ಬುಕ್​ನಲ್ಲಿ ದೂರು ಹೇಳಿಕೊಂಡಿದ್ದ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಮನೆಗೆ ಹೋಗಲು ನಮಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಅವರ ದೂರುಗಳನ್ನು ಪರಿಶೀಲಿಸಲಾಗುವುದು ಆದರೆ ವೈದ್ಯರು ಅವರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ನೀಡದ ಹೊರತು ಮನೆಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ ಎಂದಿದ್ದಾರೆ.

ವೈದ್ಯರ ಅನುಮತಿಯಿಲ್ಲದೆ ಯಾರಾದರೂ ಹೊರಹೋಗಲು ಪ್ರಯತ್ನಿಸಿದರೆ, ನಾವು ಕ್ವಾರಂಟೈನ್ ಕೇಂದ್ರವನ್ನು ತಾತ್ಕಾಲಿಕ ಜೈಲಾಗಿ ಘೋಷಿಸಲಾಗುವುದು, ಜಾಮೀನು ರಹಿತ ಪ್ರಕರಣದಲ್ಲಿ ಮೂರು ತಿಂಗಳು ಕ್ವಾರಂಟೈನ್​ ಕೇಂದ್ರದಲ್ಲೆ ಇರಿಸಿಕೊಳ್ಳಲಾಗುವುದು ಎಂದಿದ್ದಾರೆ.

ಫೇಸ್‌ಬುಕ್ ಆಂದೋಲನ ಮಾಡುವುದು ಬಿಟ್ಟು ಕ್ವಾರಂಟೈನ್​ ಕೇಂದ್ರದಲ್ಲಿ ನಿರ್ದಿಷ್ಟ ಸಮಯ ಕಳೆದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದು ಸಚಿವರು ಹೇಳಿದ್ದಾರೆ.

ತಬ್ಲೀಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಸೀದಿಗಳನ್ನು ನೋಡಲು ನಲ್ಬರಿಗೆ ಬಂದಿದ್ದ ಉತ್ತರ ಪ್ರದೇಶದ ಐವರು ವ್ಯಕ್ತಿಗಳೊಂದಿಗೆ ಈ ಜನರು ಸಂಪರ್ಕಕ್ಕೆ ಬಂದಿದ್ದರು ಮತ್ತು ಅವರಲ್ಲಿ ಕೆಲವರು ಮಾರ್ಚ್ 12 ರಂದು ಅಥಗಾಂವ್ ಕಬರ್ಸ್ಥಾನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ವೈದ್ಯರು ಪ್ರಮಾಣಪತ್ರವನ್ನು ನೀಡಿದರೆ ಮಾತ್ರ ಅವರನ್ನು ರಂಜಾನ್​ಗೂ ಮೊದಲೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ABOUT THE AUTHOR

...view details