ಹೈದರಾಬಾದ್:ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವೀಟ್ವೊಂದು ಎಲ್ಲಡೆ ಗೊಂದಲ ಉದ್ಭವವಾಗುವಂತೆ ಮಾಡಿದ್ದು, ಅಭಿಮಾನಿಗಳಲ್ಲಿ ಕೆಲಹೊತ್ತು ಶಾಕ್ಗೆ ಒಳಗಾಗುವಂತೆ ಮಾಡಿಸಿದೆ.
ಒಲಿಂಪಿಕ್ಸ್ನ ಬೆಳ್ಳಿ ಪದಕ ವಿಜೇತ ಸ್ಟಾರ್ ಪ್ಲೇಯರ್ ಪಿವಿ ಸಿಂಧು ಮಾಡಿರುವ ಟ್ವೀಟ್ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ದಿಢೀರ್ ಆಘಾತ ಮೂಡಿಸಿದೆ. ಆದರೆ ಅವರು ಮಾಡಿರುವ ಸಂಪೂರ್ಣ ಟ್ವೀಟ್ ಓದಿದ ಬಳಿಕ ಬ್ಯಾಡ್ಮಿಂಟನ್ನಿಂದ ವಿದಾಯ ಪಡೆದುಕೊಳ್ಳುತ್ತಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಟ್ವೀಟ್ನಲ್ಲಿ ಏನಿದೆ!?
ಪಿವಿ ಸಿಂಧು ಈಗಾಗಲೇ ಡೆನ್ಮಾರ್ಕ್ ಓಪನ್ನಿಂದ ಹಿಂದೆ ಸರಿದಿದ್ದು, ಇದರ ಮಧ್ಯೆ ಅವರ ಕುಟುಂಬದಲ್ಲಿನ ವಿವಾದದಿಂದಾಗಿ ಅವರು ಲಂಡನ್ನಲ್ಲಿ ಉಳಿದುಕೊಂಡಿದ್ದಾರೆ ಎಂಬ ವದಂತಿ ನಡುವೆ ಅವರು ಮಾಡಿರುವ ಟ್ವೀಟ್ ಗೊಂದಲ ಹುಟ್ಟಿಸಿತು.
ಡೆನ್ಮಾರ್ಕ್ ಟೂರ್ನಿ ನನ್ನ ಕೊನೆಯ ಪಂದ್ಯವಾಗಿದೆ ಎಂದು ಹೇಳಿರುವ ಅವರು, ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಅಶಾಂತಿ, ಕೆಟ್ಟ ಪರಿಸ್ಥಿತಿ ಉದ್ಬವವಾಗಿತ್ತು. ಆದರೆ ಇದೀಗ ಆ ಭಯದಿಂದ ನಾನು ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ.ಕೊರೊನಾ ವೈರಸ್ ಹಾಗೂ ಲಾಕ್ಡೌನ್ ನಮಗೆ ಅನೇಕ ಪಾಠ ಕಲಿಸಿದ್ದು, ಹೀಗಾಗಿ ಮನೆಯಲ್ಲೇ ಜೀವನ ಕಳೆಯುವಂತಾಗಿದೆ.
ಕೊರೊನಾ ವೈರಸ್, ಶುಚಿತ್ವದ ಬಗ್ಗೆ ಇರುವ ನಿರ್ಲಕ್ಷ್ಯದಿಂದ ಇದೀಗ ನಿವೃತ್ತಿಯಾಗುತ್ತಿದ್ದು,ಕೆಟ್ಟ ಆಲೋಚನೆಗಳಿಂದಲೂ ನಾನು ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ ಎಂದು ತಮ್ಮ ಟ್ವೀಟರ್ನಲ್ಲಿ ಹೇಳಿಕೊಂಡಿದ್ದಾರೆ. ಇದರ ಜತೆಗೆ ತಾವು ಕ್ರೀಡೆಯಿಂದ ನಿವೃತ್ತಿಯಾಗುತ್ತಿಲ್ಲ, ಬದಲಾಗಿ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಟೂರ್ನಿಗೋಸ್ಕರ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.