ಹೈದರಾಬಾದ್ : ನನ್ನ ಮತ್ತು ಪಿ ವಿ ನರಸಿಂಹರಾವ್ ಮಧ್ಯೆ ಒಡನಾಟ ಆರಂಭವಾಗಿದ್ದ 1988ರಲ್ಲಿ, ಅವರು ವಿದೇಶಾಂಗ ಸಚಿವಾಲಯದಲ್ಲಿದ್ದಾಗ ಮತ್ತು ನಾನು ಸೌತ್ ಕಮಿಷನ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ. ಆ ಸಮಯದಲ್ಲಿ ಅವರು ಜಿನೀವಾಗೆ ಬಂದಾಗ ನಾವು ಪರಸ್ಪರ ಭೇಟಿಯಾದೆವು. 1991ರಲ್ಲಿ ಸರ್ಕಾರ ರಚನೆಯಾದಾಗ ಪಿ ವಿ ನರಸಿಂಹರಾವ್ ನನ್ನನ್ನು ಕರೆದು, “ಬನ್ನಿ, ನೀವು ನನ್ನ ಹಣಕಾಸು ಸಚಿವರಾಗಬೇಕು” ಎಂದಿದ್ದರು.
ಹಲವರಿಗೆ ಅಚ್ಚರಿಯಾಗುವಂತೆ ನಾನು ಹಣಕಾಸು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ನಡೆದೆ. ನಿಮ್ಮ ಸಂಪೂರ್ಣ ಬೆಂಬಲವಿದ್ದರೆ ಮಾತ್ರ ನಾನು ಹಣಕಾಸು ಸಚಿವ ಹುದ್ದೆ ಒಪ್ಪಿಕೊಳ್ಳುತ್ತೇನೆ ಎಂದು ಮೊದಲೇ ನಾನು ನರಸಿಂಹ ರಾವ್‌ಗೆ ಹೇಳಿದ್ದೆ. ಅವರು ತಮಾಷೆಯಿಂದಲೇ ನಿಮ್ಮ ಹುದ್ದೆಯಲ್ಲಿ ನೀವು ಮುಕ್ತವಾಗಿದ್ದೀರಿ. ಪಾಲಿಸಿಗಳು ಯಶಸ್ವಿಯಾದರೆ ನಾವೆಲ್ಲರೂ ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ವಿಫಲವಾದ್ರೆ, ನೀವು ಮನೆಗೆ ಹೋಗಬೇಕಾಗುತ್ತದೆ” ಎಂದಿದ್ದರು. ಪ್ರಮಾಣ ವಚನ ಸಮಾರಂಭದ ನಂತರ, ವಿಪಕ್ಷಗಳ ಸಭೆಯನ್ನು ಪ್ರಧಾನಿ ರಾವ್ ಕರೆದಿದ್ದರು. ನಾನು ವಿಪಕ್ಷಗಳಿಗೆ ವಿವರಣೆ ನೀಡಿದೆ. ವಿಪಕ್ಷಗಳಿಗೆ ತುಂಬಾ ಮೆಚ್ಚುಗೆಯಾಯಿತು ಎಂಬ ಪ್ರತಿಕ್ರಿಯೆ ಬಂತು. ಆರ್ಥಿಕ ಸುಧಾರಣೆ ವಿಚಾರದಲ್ಲಿ ರಾವ್ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.
ಆರ್ಥಿಕ ಸುಧಾರಣೆಗಳು ತಕ್ಷಣ ನಡೆಯುವುದಿಲ್ಲ. ಆ ಕಾಲದ ದೂರದೃಷ್ಟಿ ಹೊಂದಿರುವ ನಾಯಕತ್ವ ಇಲ್ಲದಿದ್ದರೆ ಐತಿಹಾಸಿಕವಾದ ಬದಲಾವಣೆ ನಡೆಯಲು ಸಾಧ್ಯವೇ ಇಲ್ಲ. ನಮ್ಮ ಆರ್ಥಿಕ ನೀತಿಗಳನ್ನು ಬದಲಾವಣೆ ಮಾಡಲು ಪ್ರಾಮುಖ್ಯತೆ ನೀಡಿದ, ಸಾಮಾಜಿಕ ನ್ಯಾಯದ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿದ ಮೊದಲ ರಾಜಕೀಯ ನಾಯಕತ್ವ ಎಂದರೆ ಅದು ಶ್ರೀಮತಿ ಇಂದಿರಾ ಗಾಂಧಿಯವರದಾಗಿತ್ತು. ಅವರ ಆರಂಭಿಕ ಕ್ರಮಗಳನ್ನು ರಾಜೀವ್ ಗಾಂಧಿ ಮುಂದುವರಿಸಿದರು. ಹೊಸ ಮಾಹಿತಿ ಯುಗ ಆಗಮಿಸುತ್ತಿರುವುದನ್ನು ಅವರು ಸರಿಯಾಗಿ ಗ್ರಹಿಸಿದ್ದರು. ರಾಜೀವ್ ಗಾಂಧಿ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರವು 1980ರ ದ್ವಿತೀಯಾರ್ಧದಲ್ಲಿ ಆ ದಿಕ್ಕಿಗೆ ಅರ್ಥಿಕ ಸುಧಾರಣೆಗಳನ್ನು ನಡೆಸಲು ಆರಂಭಿಸಿತು.
ಆರ್ಥಿಕ ಸುಧಾರಣೆಗಳನ್ನು ಮಾಡಲು ನರಸಿಂಹ್ ರಾವ್ ಕೈಗೊಂಡ ಮುಕ್ತ ಕ್ರಮಗಳನ್ನು ನಾವು ಮೆಚ್ಚಬೇಕಿದೆ. 1991ರಲ್ಲಿ ಕಾಂಗ್ರೆಸ್ ನರಸಿಂಹ ರಾವ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದಾಗ, ನಾನು ಹಣಕಾಸು ಸಚಿವನಾದಾಗ ಆರ್ಥಿಕ ಸುಧಾರಣೆಗಳನ್ನು ಆರಂಭಿಸಲಾಯಿತು. ಪ್ರಧಾನಿ ನರಸಿಂಹ್ ರಾವ್ ನೇತೃತ್ವದಲ್ಲಿ ನಾವು ನಮ್ಮ ಹಣಕಾಸು ನೀತಿಗಳು ಮತ್ತು ನಮ್ಮ ವಿದೇಶಾಂಗ ನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಸುಧಾರಣೆಗಳಲ್ಲಿ ನಾವು ತೆಗೆದುಕೊಂಡ ಪ್ರಮುಖ ಕ್ರಮಗಳೆಂದರೆ ಭಾರತೀಯತೆ ವಿಶಿಷ್ಟ ರೂಪವನ್ನು ಆರಂಭಿಸಿದ್ದಾಗಿತ್ತು. ಈಗಾಗಲೇ ಇರುವ ಸಿದ್ಧ ಸೂತ್ರಕ್ಕೆ ನಾವು ಮೊರೆ ಹೋಗಲಿಲ್ಲ.