ಕರ್ನಾಟಕ

karnataka

ETV Bharat / bharat

ಇಲ್ಲಿ ಬೂದಿಯಿಂದ ಆಚರಿಸಲಾಗುತ್ತೆ ಹೋಳಿ: ಪೂರ್ಣಿಯಾ ಬಣ್ಣಗಳ ಹಬ್ಬದ ಇತಿಹಾಸ ರೋಚಕ! - ಬೂದಿಯಿಂದ ಹೋಳಿ ಆಚರಣೆ

ಹೋಳಿ ಹಬ್ಬವನ್ನು ದೇಶಾದ್ಯಂತ ವಿವಿಧ ಬಣ್ಣಗಳನ್ನು ಬಳಸಿ ಆಚರಿಸಲಾಗುತ್ತದೆ. ಆದರೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಜನರು ಇದನ್ನು ಬೂದಿಯಿಂದ ಆಚರಿಸುತ್ತಾರೆ.

ash holi
ಬೂದಿ ಹೋಳಿ

By

Published : Mar 10, 2020, 10:33 AM IST

Updated : Mar 10, 2020, 1:36 PM IST

ಪೂರ್ಣಿಯಾ(ಬಿಹಾರ): ಹೋಳಿ ಹಬ್ಬವನ್ನು ದೇಶಾದ್ಯಂತ ವಿವಿಧ ಬಣ್ಣಗಳನ್ನು ಬಳಸಿ ಆಚರಿಸಲಾಗುತ್ತದೆ. ಆದರೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಜನರು ಇದನ್ನು ಬೂದಿಯಿಂದ ಆಚರಿಸುತ್ತಾರೆ.

ಹೋಳಿ ಹಬ್ಬ ಆಚರಣೆ ವೇಳೆ ಸ್ಥಳೀಯರು ಬೂದಿ ಬಳಸುತ್ತಾರೆ. ಅಂದಿನ ಪ್ರದೇಶದ ಆಡಳಿತಗಾರನಾಗಿದ್ದ ರಾಜ ಹಿರಣ್ಯ ಕಶ್ಯಪನನ್ನು ಎಲ್ಲಾ ಜನರು ಆರಾಧಿಸುತ್ತಿದ್ದರು. ಆದರೆ ಹಿರಣ್ಯ ಕಶ್ಯಪನ ಮಗ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿದ್ದ. ಹಾಗಾಗಿ ತನ್ನ ಮಗನ ಬಗ್ಗೆ ಹಿರಣ್ಯ ಕಶ್ಯಪ ನಿರಾಶೆಗೊಳ್ಳುತ್ತಾನೆ. ಹಾಗಾಗಿ ಹಿರಣ್ಯ ಕಶ್ಯಪ ತನ್ನ ಮಗನನ್ನು ಬೆಂಕಿಗೆ ಬಲಿ ಕೊಡಲು ಆದೇಶಿಸುತ್ತಾನೆ.

ಪೂರ್ಣಿಯಾ ಬಣ್ಣಗಳ ಹಬ್ಬದ ಇತಿಹಾಸ

ಆದೇಶದಂತೆ ಅದನ್ನು ಪಾಲಿಸಲು ಕಶ್ಯಪನ ಸಹೋದರಿ ಮುಂದಾಗುತ್ತಾಳೆ. ಆದರೆ ಪ್ರಹ್ಲಾದ್​ ಬೆಂಕಿಯಿಂದ ಪರಾಗಬಹುದು ಎಂಬ ಸತ್ಯ ಹೋಲಿಕಾಗೆ ತಿಳಿದಿರಲಿಲ್ಲ. ಯಾಕೆಂದರೆ ಹೋಲಿಕಾ ಬೆಂಕಿಯಿಂದ ಪಾರಾಗುವ ವರ ಪಡೆದಿರುತ್ತಾಳೆ. ನಂತರ ಅವಳೇ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಾಳೆ. ಭಗವಾನ್ ನರಸಿಂಹ ಸ್ವಾಮಿ ಪ್ರಹ್ಲಾದನನ್ನು ಬೆಂಕಿಯಿಂದ ಪಾರು ಮಾಡುತ್ತಾನೆ. ಇನ್ನು ಈ ಚಿತಾ ಭಸ್ಮದಿಂದಲೇ ಹಳ್ಳಿಯ ಜನರು ಹೋಳಿಯನ್ನು ಆಚರಿಸಿದರಂತೆ. ಇಲ್ಲಿನ ನರಸಿಂಗದ್ವಾರ ದೇವಾಲಯ ಹೋಳಿಯ ದೈವಿಕ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಈ ದೇವಾಲಯ ಈ ಎಲ್ಲಾ ಐತಿಹಾಸಿಕ ಬೆಳವಣಿಗೆಗಳ ಮುಖ್ಯ ತಾಣವಾದ ಪ್ರಹ್ಲಾದ ನಗರಕ್ಕೆ ಪ್ರವೇಶ ದ್ವಾರವಾಗಿದೆ ಎಂದು ಕೂಡ ಹೇಳಲಾಗುತ್ತದೆ.

ಇಲ್ಲಿ ಮತ್ತೊಂದು ಬೆರಗುಗೊಳಿಸುವ ಸ್ಥಳವೆಂದರೆ ನರಸಿಂಹಸ್ವಾಮಿ ಹೊರ ಬಂದಂತಹ ಕಂಬ. ಇದು ಮಾಣಿಕ್ಯ ಸ್ತಂಭ ಎಂದು ಜನಪ್ರಿಯವಾಗಿದೆ. ಏಕತೆಯನ್ನು ಬಿಂಬಿಸುವ ಹಬ್ಬ ಹೋಳಿಯಾಗಿದೆ. ಇನ್ನು ಉತ್ತರ ಭಾರತದಲ್ಲಿ ಇದನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

Last Updated : Mar 10, 2020, 1:36 PM IST

ABOUT THE AUTHOR

...view details