ಹೈದರಾಬಾದ್: ಹಿಂದಿನ ಖುತುಗಳಲ್ಲಿನ ಮಾದರಿಯಂತೆ ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆಎಂಎಸ್) 2020-21ರಲ್ಲಿ ಎಂಎಸ್ಪಿ ಯೋಜನೆಗಳ ಪ್ರಕಾರ ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವುದನ್ನು ಮುಂದುವರೆಸಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ಉತ್ತರಾಖಂಡ, ತಮಿಳುನಾಡು, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಕೇರಳ, ಗುಜರಾತ್, ಆಂಧ್ರಪ್ರದೇಶ, ಛತ್ತೀಸ್ಗಢ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಾಗವಾಗಿ ಖಾರಿಫ್ 2020-21ರ ಭತ್ತದ ಸಂಗ್ರಹವು ಮುಂದುವರೆಯುತ್ತಿದೆ. ಹಾಗೆಯೇ ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್, ಅಸ್ಸೋಂ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ 05.02.2021 ರ ವರೆಗೆ 614.27 ಎಲ್‌ಎಂಟಿ ಭತ್ತ ಖರೀದಿಸಲಾಗಿದೆ.
ಕಳೆದ ವರ್ಷದ 521.93 ಎಲ್‌ಎಂಟಿಗೆ ಹೋಲಿಸಿದರೆ ಈ ಬಾರಿ ಶೇಕಡಾ 17.69 ರಷ್ಟು ಹೆಚ್ಚಾಗಿದೆ. ಒಟ್ಟು 614.27 ಎಲ್‌ಎಂಟಿಯ ಖರೀದಿಯಲ್ಲಿ, ಪಂಜಾಬ್ ತಾಜ್ಯ ಒಂದೇ 202.82 ಎಲ್‌ಎಂಟಿ ಕೊಡುಗೆ ನೀಡಿದೆ. ಇದು ಒಟ್ಟು ಸಂಗ್ರಹದ ಶೇಕಡಾ 33.01 ರಷ್ಟಿದೆ. ಎಂಎಸ್‌ಪಿ ಮೌಲ್ಯ 1,15,974.36 ಕೋಟಿ ರೂ.ಗಳೊಂದಿಗೆ ಈಗಾಗಲೇ ನಡೆಯುತ್ತಿರುವ ಕೆಎಂಎಸ್ ಖರೀದಿ ಕಾರ್ಯಾಚರಣೆಯಿಂದ ಸುಮಾರು 85.67 ಲಕ್ಷ ರೈತರಿಗೆ ಇದು ಲಾಭವಾಗಿದೆ.
ಮೂಂಗ್, ಉರಾದ್, ತೊಗರಿ, ನೆಲಗಡಲೆ ಮತ್ತು ಸೋಯಾಬೀನ್ ಸಂಗ್ರಹದ ಅಂಕಿ ಅಂಶ ಪ್ರಸ್ತಾವನೆಯ ಆಧಾರದ ಮೇಲೆ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ಬೆಂಬಲ ಯೋಜನೆ (ಪಿಎಸ್‌ಎಸ್) ಯೋಜನೆ ಅಡಿಯಲ್ಲಿ 2020 ರಲ್ಲಿ 51.92 ಎಲ್ಎಂಟಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳನ್ನು ಖರೀದಿಸಲು ಅನುಮೋದನೆ ನೀಡಲಾಯಿತು.
ಇದರಲ್ಲಿ ಪ್ರಮುಖವಾಗಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ 1.23 ಎಲ್‌ಎಂಟಿ ಯನ್ನು ದೀರ್ಘಕಾಲಿಕ ಬೆಳೆ ಖರೀದಿಸಲು ಅನುಮತಿ ನೀಡಲಾಯಿತು. ಇದಲ್ಲದೇ, ಸಂಬಂಧಪಟ್ಟ ರಾಜ್ಯ ಸರ್ಕಾರದ ಪ್ರಸ್ತಾವನೆಗಳ ಆಧಾರದ ಮೇಲೆ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ರಾಬಿ ಮಾರ್ಕೆಟಿಂಗ್ ಸೀಸನ್ 2020-2021ರ 14.20 ಎಲ್ಎಂಟಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
ಹತ್ತಿ ಸಂಗ್ರಹದ ಅಂಕಿ ಸಂಖ್ಯೆ ನಾಮನಿರ್ದೇಶಿತ ಖರೀದಿ ಏಜೆನ್ಸಿಗಳ ಮೂಲಕ ಕೇಂದ್ರ ನೋಡಲ್ ಏಜೆನ್ಸಿಗಳು ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೊಯ್ಲು ಅವಧಿಯಲ್ಲಿ ಮಾರುಕಟ್ಟೆ ದರವು ಎಂಎಸ್‌ಪಿಗಿಂತ ಕಡಿಮೆಯಿದ್ದರೆ ಇತರ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪಿಎಸ್ಎಸ್ ಅಡಿ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿ ಖರೀದಿಸುವ ಪ್ರಸ್ತಾಪಗಳನ್ನು ಸ್ವೀಕರಿಸಿದ ನಂತರವೂ ಅನುಮೋದನೆ ನೀಡಲಾಗುತ್ತದೆ. ಇದರಿಂದಾಗಿ ಈ ಬೆಳೆಗಳ ಎಫ್ಎಕ್ಯೂ ದರ್ಜೆಯ ಸಂಗ್ರಹವನ್ನು ನೋಂದಾಯಿತ ರೈತರಿಂದ ನೇರವಾಗಿ 2020-21ನೇ ಸಾಲಿನ ಅಧಿಸೂಚಿತ ಎಂಎಸ್ಪಿ ಮುಖಾಂತರ ಪಡೆಯಬಹುದಾಗಿದೆ.
05.02.2021 ರವರೆಗೆ, ಸರ್ಕಾರವು ತನ್ನ ನೋಡಲ್ ಏಜೆನ್ಸಿಗಳ ಮೂಲಕ 3,08,620.31 ಮೆಟ್ರಿಕ್ ಟನ್ ಮೂಂಗ್, ಉರಾದ್, ತೊಗರಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿ ಮಾಡಿದೆ. ಇದು ಎಂಎಸ್ಪಿ ಮೌಲ್ಯ 1,661.70 ಕೋಟಿ ರೂ.ಗಳನ್ನು ಹೊಂದಿದ್ದು, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾದ 1,67,239 ರೈತರಿಗೆ ಸಹಕಾರಿಯಾಗಿದೆ.
ಹಾಗೆಯೇ 05.02.2021 ರವರೆಗೆ 52.40 ಕೋಟಿ ರೂ.ಗಳ ಎಂಎಸ್‌ಪಿ ಮೌಲ್ಯ ಹೊಂದಿರುವ 5089 ಮೆಟ್ರಿಕ್ ಟನ್ ಕೊಬ್ಬರಿ (ದೀರ್ಘಕಾಲಿಕ ಬೆಳೆ) ಅನ್ನು ಸಂಗ್ರಹಿಸಲಾಗಿದ್ದು, ಕರ್ನಾಟಕ ಮತ್ತು ತಮಿಳುನಾಡಿನ 3961 ರೈತರಿಗೆ ಇದು ಲಾಭದಾಯಕವಾಗಿದೆ. ಪ್ರಸ್ತುತ, ಕೊಬ್ಬರಿ (ದೀರ್ಘಕಾಲಿಕ ಬೆಳೆ) ಮತ್ತು ಉದ್ದುಗೆ ಸಂಬಂಧಿಸಿದಂತೆ, ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ದರಗಳು ಎಂಎಸ್‌ಪಿಗಿಂತ ಹೆಚ್ಚಿವೆ. ಈ ಹಿನ್ನೆಲೆ ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಸರ್ಕಾರಗಳು ಖರೀದಿಸಲು ಅಗತ್ಯ ವ್ಯವಸ್ಥೆಗಳನ್ನು ಹಾಗೂ ದಿನಾಂಕವನ್ನು ನಿಗದಿ ಮಾಡಲು ಮುಂದಾಗಿವೆ.
ಎಂಎಸ್ಪಿ ಅಡಿಯಲ್ಲಿ ಬೀಜ ಹತ್ತಿ (ಕಪಾಸ್) ಖರೀದಿ ಕಾರ್ಯಾಚರಣೆಗಳು ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸರಾಗವಾಗಿ ನಡೆಯುತ್ತಿವೆ. 05.02.2021 ರವರೆಗೆ ರೂ .26,527.74 ಕೋಟಿ ಮೌಲ್ಯದ 90,73,030 ಹತ್ತಿ ಬೇಲ್‌ಗಳ ಸಂಗ್ರಹ ಮಾಡಲಾಗಿದ್ದು, 18,77,124 ರೈತರಿಗೆ ಅನುಕೂಲವಾಗಿದೆ.