ಪಂಜಾಬ್:ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಪಂಜಾಬ್‌ನ ಫಿರೋಜ್‌ಪುರದ ಖಾಸಗಿ ಶಾಲೆಯ ಲ್ಯಾಬ್ನಲ್ಲಿ ಯೋಧರಿಗಾಗಿ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನ ತಯಾರಿಸಲಾಗುತ್ತಿದೆ.
ಯೋಧರಿಗಾಗಿ ಉಚಿತ ಮಾಸ್ಕ್,ಸ್ಯಾನಿಟೈಸರ್ ತಯಾರಿಕೆ..ಎಲ್ಲಿ ಅನ್ನೋದೇ ಇಂಟ್ರೆಸ್ಟಿಂಗ್! - ಕೊರೊನಾ ವೈರಸ್
ಕೊರೊನಾ ವೈರಸ್ ಹಿನ್ನೆಲೆ,ಪಂಜಾಬ್‌ನ ಫಿರೋಜ್‌ಪುರದ ಖಾಸಗಿ ಶಾಲೆಯ ಲ್ಯಾಬ್ನಲ್ಲಿ ಯೋಧರಿಗಾಗಿ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನ ತಯಾರಿಸಲಾಗುತ್ತಿದೆ.
![ಯೋಧರಿಗಾಗಿ ಉಚಿತ ಮಾಸ್ಕ್,ಸ್ಯಾನಿಟೈಸರ್ ತಯಾರಿಕೆ..ಎಲ್ಲಿ ಅನ್ನೋದೇ ಇಂಟ್ರೆಸ್ಟಿಂಗ್! Punjab school battles COVID-19 by way of making masks and sanitiser in its lab](https://etvbharatimages.akamaized.net/etvbharat/prod-images/768-512-6935435-302-6935435-1587806749370.jpg)
ಈ ಬಗ್ಗೆ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಶಾಲೆಯ ನಿರ್ದೇಶಕ ಅನಿರುದ್ಧ್ ಗುಪ್ತಾ, ತಮ್ಮ ಕಡಿಮೆ ಬೆಲೆಯ ವೆಂಟಿಲೇಟರ್‌ಗಳನ್ನ ಅಭಿವೃದ್ಧಿಪಡಿಸುವ ಯೋಜನೆಯಲ್ಲೂ ಸಹ ಕಾರ್ಯನಿರ್ವಹಿಸುತ್ತಿದೆ. ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರು ಸೇರಿದಂತೆ ಮುಂಚೂಣಿ ಕಾರ್ಮಿಕರು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಬೇಕು. ನಮ್ಮ ಯೋಧರಿಗೆ ಸಹಾಯ ಮಾಡುವ ಸಲುವಾಗಿ ನಾವು ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನ ತಯಾರಿಸಲು ಪ್ರಾರಂಭಿಸಿದ್ದೇವೆ. ಅದನ್ನು ಅವರಿಗೆ ಉಚಿತವಾಗಿ ವಿತರಿಸಲಾಗುವುದು ಎಂದರು.
ಇನ್ನು, ಎಲ್ಲರೂ ಮನೆಯೊಳಗೆ ಇರಿ. ಮಾರಣಾಂತಿಕ ವೈರಸ್ ಸೋಲಿಸಲು ಸರ್ಕಾರವು ಒದಗಿಸಿದ ಕೊರೊನಾ ವೈರಸ್ ಸುರಕ್ಷತಾ ಕ್ರಮಗಳನ್ನ ಅನುಸರಿಸಿ. ಬಿಕ್ಕಟ್ಟಿನ ಈ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಮತ್ತು ಯಾವುದೇ ಸಂದರ್ಭದಲ್ಲೂ ಲಾಕ್‌ಡೌನ್ ಉಲ್ಲಂಘಿಸಬಾರದು ಎಂದಿದ್ದಾರೆ.