ಕರ್ನಾಟಕ

karnataka

ಆನ್​ಲೈನ್​​​ ದೋಖಾ: ಲಕ್ಷ ಲಕ್ಷ ಹಣ ಕಳೆದುಕೊಂಡ ಸಿಎಂ ಪತ್ನಿ!

ಪಂಜಾಬ್​ ಸಿಎಂ ಅಮರೀಂದರ್ ಸಿಂಗ್ ಪತ್ನಿ ಪ್ರಿನೀತ್​ ಕೌರ್ ಆನ್​ಲೈನ್ ಮೋಸದ ಜಾಲಕ್ಕೆ ಸಿಕ್ಕಿ ಬರೋಬ್ಬರಿ 23 ಲಕ್ಷ ರೂ. ಕಳೆದುಕೊಂಡಿರುವುದು ವರದಿಯಾಗಿದೆ.

By

Published : Aug 8, 2019, 10:08 AM IST

Published : Aug 8, 2019, 10:08 AM IST

ಆನ್​ಲೈನ್ ದೋಖಾ

ಪಟಿಯಾಲ(ಪಂಜಾಬ್):ಆನ್​ಲೈನ್ ಮೂಲಕ ಸಾವಿರ, ಲಕ್ಷಗಳಲ್ಲಿ ಹಣ ಕಳೆದುಕೊಳ್ಳುವ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತವೆ. ಇದೇ ಮೋಸದ ಜಾಲದಲ್ಲಿ ಸಿಎಂ ಪತ್ನಿಯೋರ್ವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಪಂಜಾಬ್​ ಸಿಎಂ ಅಮರೀಂದರ್ ಸಿಂಗ್ ಪತ್ನಿ ಪ್ರಿನೀತ್​ ಕೌರ್ ಆನ್​ಲೈನ್ ಮೋಸದ ಜಾಲಕ್ಕೆ ಸಿಕ್ಕಿ ಬರೋಬ್ಬರಿ 23 ಲಕ್ಷ ರೂ. ಕಳೆದುಕೊಂಡಿರುವುದು ವರದಿಯಾಗಿದೆ.

ಬ್ಯಾಂಕ್ ಮ್ಯಾನೇಜರ್​ ಎಂದು ಕರೆ ಮಾಡಿದ್ದಾತ ಸಿಎಂ ಅಮರೀಂದರ್ ಪತ್ನಿ ಬಳಿ ಬ್ಯಾಂಕ್​ ಅಕೌಂಟ್ ನಂಬರ್​​, ಎಟಿಎಂ ಕಾರ್ಡ್​ ನಂಬರ್​, ಸಿವಿಸಿ ಹಾಗೂ ಒಟಿಪಿಯನ್ನು ಪಡೆದುಕೊಂಡಿದ್ದ. ಈ ಮೂಲಕ 23 ಲಕ್ಷ ರೂ. ಹಣವನ್ನು ಸುಲಭವಾಗಿ ಎಗಿರಿಸಿದ್ದಾನಂತೆ.

ಜುಲೈ 29ರಂದು ಈ ಘಟನೆ ನಡೆದಿದ್ದು, ಸದ್ಯ ಹಣ ಎಗರಿಸಿದ್ದ ಆಸಾಮಿಯನ್ನು ರಾಂಚಿ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಪ್ರಿನೀತ್​ ಕೌರ್ ಪಟಿಯಾಲ ಕ್ಷೇತ್ರದ ಸಂಸದೆ.

ABOUT THE AUTHOR

...view details