ನವದೆಹಲಿ: ತೊಂದರೆಗೀಡಾಗಿರುವ ವಲಸಿಗರಿಗೆ ಸಹಾಯ ಮಾಡುವ ಕಾಂಗ್ರೆಸ್ ಪಕ್ಷದ ಪ್ರಯತ್ನಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆಗೆ ಉತ್ತರಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಬಿಜೆಪಿ ಸರ್ಕಾರವು ವಲಸಿಗರ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕುರಿತು ನಿರ್ಮಲಾ ಸೀತಾರಾಮನ್ ಹೇಳಿಕೆ ಟೀಕಿಸಿದ ಪಂಜಾಬ್ ಸಿಎಂ - ನಿರ್ಮಲಾ ಸೀತಾರಾಮನ್ ಹೇಳಿಕೆ ಟೀಕಿಸಿದ ಪಂಜಾಬ್ ಸಿಎಂ
ವಲಸಿಗರಿಗೆ ಸಹಾಯ ಮಾಡುವ ಕಾಂಗ್ರೆಸ್ ಪಕ್ಷದ ಪ್ರಯತ್ನಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆಗೆ ಉತ್ತರಿಸಿದ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಬಿಜೆಪಿಯೇ ವಲಸಿಗರ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದರು.
![ಕಾಂಗ್ರೆಸ್ ಕುರಿತು ನಿರ್ಮಲಾ ಸೀತಾರಾಮನ್ ಹೇಳಿಕೆ ಟೀಕಿಸಿದ ಪಂಜಾಬ್ ಸಿಎಂ amarindar singh](https://etvbharatimages.akamaized.net/etvbharat/prod-images/768-512-7240057-925-7240057-1589740440965.jpg)
amarindar singh
ವಲಸಿಗರ ಗಂಭೀರ ಸಮಸ್ಯೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ. ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷವು ಹಗಲು ರಾತ್ರಿ ಶ್ರಮಿಸುತ್ತಿದೆ. ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹೋಗಲು ಅನುಕೂಲ ಮಾಡಿಕೊಡುತ್ತಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು.
ಸೋನಿಯಾ ಗಾಂಧಿ ಅವರು ಪಕ್ಷದ ಮುಖ್ಯಮಂತ್ರಿಗಳಿಗೆ ವಲಸಿಗರಿಗೆ ಸಹಾಯ ಮಾಡಿ ಎಂದು ಕೇಳಬಹುದಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ನಡೆದುಕೊಂಡು ಊರಿಗೆ ಹೋಗುತ್ತಿದ್ದ ವಲಸಿಗರನ್ನು ಭೇಟಿಯಾದ ರಾಹುಲ್ ಗಾಂಧಿ ಅವರೊಂದಿಗೆ ನಡೆದುಕೊಂಡು ಹೋಗಬಹುದಿತ್ತು ಎಂದಿದ್ದರು.