ಪುಣೆ:ಹೋಟೆಲ್ ರೂಂಗಳಲ್ಲಿ, ಮಹಿಳೆಯರ ಬೆಡ್ರೂಂ, ಬಾತ್ರೂಂಗಳಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿರುವ ಘಟನೆ ಈಗಾಗಲೇ ಸಾಕಷ್ಟು ಬಾರಿ ವರದಿಯಾಗಿದೆ.ಇದೀಗ ಮಹಾರಾಷ್ಟ್ರದ ಪುಣೆಯ ಕೆಫೆಯೊಂದರ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಪತ್ತೆಯಾಗಿದೆ.
ಇಲ್ಲಿನ ಹಿಂಜೆವಾಡಿಯಲ್ಲಿರುವ Cafe BeHive ನಲ್ಲಿರುವ ಮಹಿಳಾ ಶೌಚಾಲಯದಲ್ಲಿ ಹಿಡನ್ ಕಾಮೆರಾ ಕಂಡು ಬಂದಿದ್ದು, ಇದನ್ನು ನೋಡಿರುವ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಎಚ್ಚರಿಸಿದ್ದಾರೆ.
ಕೆಫೆಗೆ ಆಗಮಿಸಿದ್ದ ಮಹಿಳೆ ಅಲ್ಲಿನ ಮಹಿಳಾ ಶೌಚಾಲಯಕ್ಕೆ ತೆರಳಿದ್ದು ಈ ವೇಳೆ ಆಕೆಯ ಕಣ್ಣಿಗೆ ಮೊಬೈಲ್ ಕ್ಯಾಮೆರಾ ಕಂಡಿದೆ. ತಕ್ಷಣವೇ ಈ ಬಗ್ಗೆ ಕೆಫೆ ಮ್ಯಾನೆಜ್ಮೆಂಟ್ಗೆ ಮಾಹಿತಿ ನೀಡಲು ಮುಂದಾಗಿದ್ದಾಳೆ. ಆದರೆ ಈ ವೇಳೆ ಆಕೆಯನ್ನ ಹೊರಗೆ ಕರೆದ ಅವರು ತಕ್ಷಣವೇ ಕ್ಯಾಮೆರಾ ತೆಗೆದುಹಾಕಿದ್ದಾರೆ. ಇದೇ ವೇಳೆ ಮಹಿಳೆಗೆ ಸ್ವಲ್ಪ ಹಣವನ್ನೂ ನೀಡಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ.
ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.