ಕರ್ನಾಟಕ

karnataka

ETV Bharat / bharat

ರೆಡ್​​ಲೈಟ್​​ ಏರಿಯಾದಲ್ಲಿ ಮುನ್ನೆಚ್ಚರಿಕಾ ಕ್ರಮದ ಜತೆಗೆ ವೃತ್ತಿಗೆ ಮರಳಲು ಲೈಂಗಿಕ ಕಾರ್ಯಕರ್ತೆಯರು ರೆಡಿ - pune sex workers started work again

ಗ್ರಾಹಕರೊಂದಿಗೆ ಇರುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಲೈಂಗಿಕ ಕಾರ್ಯಕರ್ತರಿಗೆ ಆಡಿಯೋ ಮತ್ತು ವಿಡಿಯೋಗಳ ಮೂಲಕ ಈಗಾಗಲೇ ಎನ್‌ಜಿಒ ತರಬೇತಿ ನೀಡಲು ಪ್ರಾರಂಭಿಸಿದೆ. ಗ್ರಾಹಕರೊಂದಿಗೆ ದೈಹಿಕ ಸಂಪರ್ಕ ಹೊಂದುವ ಕಾರಣ ಮುನ್ನೆಚ್ಚರಿಕೆಯಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ..

pune-sex-workers-seek-to-resume-work-with-caution-sops
ವೃತ್ತಿಗೆ ಮರಳಲು ಲೈಂಗಿಕ ಕಾರ್ಯಕರ್ತೆಯರ ತಯಾರಿ

By

Published : Jun 22, 2020, 4:00 PM IST

ಪುಣೆ/ಮಹಾರಾಷ್ಟ್ರ: ಲಾಕ್‌ಡೌನ್ ಸಡಿಲಿಕೆಯೊಂದಿಗೆ ಪುಣೆಯ ರೆಡ್ ಲೈಟ್ ಪ್ರದೇಶದಲ್ಲಿನ ಕೆಲವು ಲೈಂಗಿಕ ಕಾರ್ಯಕರ್ತೆಯರು COVID-19ನಿಂದ ರಕ್ಷಿಸಿಕೊಳ್ಳುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳು ಮತ್ತು SOP(Standard Operating Procedure)ಗಳನ್ನು ಪಾಲಿಸುವ ಮೂಲಕ ಮತ್ತೆ ತಮ್ಮ ಬ್ಯುಸಿನೆಸ್​ಗೆ ಹಿಂತಿರುಗಲು ತಯಾರಿ ನಡೆಸಿದ್ದಾರೆ.

ಕೊರೊನಾ ವೈರಸ್​ ಹರಡುವಿಕೆ ಹಾಗೂ ಲಾಕ್​ಡೌನ್​ನಿಂದಾಗಿ ಮಹಾರಾಷ್ಟ್ರದ ಬುಧ್ವಾರ್ ಪೆಥ್ ಪ್ರದೇಶದ ಸುಮಾರು 3,000 ಲೈಂಗಿಕ ಕಾರ್ಯಕರ್ತೆಯರಿಗೆ ಜೀವನೋಪಾಯ ಮಾರ್ಗವೇ ಮುಚ್ಚಿದಂತಾಗಿತ್ತು ಎಂದು ಲೈಂಗಿಕ ಕಾರ್ಯಕರ್ತೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎನ್​​ಜಿಒ ಒಂದು ತಿಳಿಸಿದೆ.

ಈಗ ಲಾಕ್‌ಡೌನ್ ಸಡಿಲಗೊಂಡಿರುವುದರಿಂದ ಅವರು ಪುನಃ ತಮ್ಮ ಕೆಲಸ ಆರಂಭಿಸಲು ಮುಂದಾಗಿದ್ದಾರೆ ಮತ್ತು "ಫೋನ್ ಸೆಕ್ಸ್"ನಂತಹ ಸೇವೆಗಳಿಗೆ ಸಿದ್ಧರಾಗಿದ್ದಾರೆ ಎಂದು ಪುಣೆ ನಗರ ಮೂಲದ ಎನ್‌ಜಿಒ 'ಸಹೇಲಿ ಸಂಘ'ದ ಕಾರ್ಯನಿರ್ವಾಹಕ ನಿರ್ದೇಶಕಿಯೊಬ್ಬರು ತಿಳಿಸಿದ್ದಾರೆ. ಈ ಹಿನ್ನೆಲೆ ಗ್ರಾಹಕರ ಬಳಿ ಲೈಂಗಿಕ ಕಾರ್ಯಕರ್ತರು ತೆರಳುವಾಗ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಎನ್​​ಜಿಒ ಅವರಿಗೆ ತರಬೇತಿ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ದೇಶಾದ್ಯಂತ ಲೈಂಗಿಕ ಕಾರ್ಯಕರ್ತೆಯರಿಗಾಗಿ ಕೆಲ ಮಾರ್ಗಸೂಚಿಗಳನ್ನು ಕೂಡ ತಯಾರಿಸಲಾಗಿದೆ.

ರೆಡ್​​ ಲೈಟ್​​​ ಏರಿಯಾದಲ್ಲಿ ಯಾವುದೇ COVID-19 ಪ್ರಕರಣಗಳು ವರದಿಯಾಗಿಲ್ಲವಾದ್ದರಿಂದ, ಕಂಟೇನ್‌ಮೆಂಟ್ ವಲಯ ಟ್ಯಾಗ್ ಮತ್ತು ಬ್ಯಾರಿಕೇಡ್ಸ್​​ಗಳನ್ನು ಇಲ್ಲಿ ತೆಗೆದು ಹಾಕಲಾಗಿದೆ. ಆದರೆ, ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರು ಇನ್ನೂ ತಮ್ಮ ಕೆಲಸವನ್ನು ಪ್ರಾರಂಭಿಸಲು ಸಿದ್ಧರಿಲ್ಲದಿದ್ದರೂ, ಬೆರಳೆಣಿಕೆಯಷ್ಟು ಮಂದಿ ಕೊರೊನಾ ಲಾಕ್​ಡೌನ್​ನಿಂದ ತಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಪುನಃ ಕೆಲಸಕ್ಕೆ ಮರಳಲು ಬಯಸಿದ್ದಾರೆ.

ಗ್ರಾಹಕರೊಂದಿಗೆ ಇರುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಲೈಂಗಿಕ ಕಾರ್ಯಕರ್ತರಿಗೆ ಆಡಿಯೋ ಮತ್ತು ವಿಡಿಯೋಗಳ ಮೂಲಕ ಈಗಾಗಲೇ ಎನ್‌ಜಿಒ ತರಬೇತಿ ನೀಡಲು ಪ್ರಾರಂಭಿಸಿದೆ. ಗ್ರಾಹಕರೊಂದಿಗೆ ದೈಹಿಕ ಸಂಪರ್ಕ ಹೊಂದುವ ಕಾರಣ ಮುನ್ನೆಚ್ಚರಿಕೆಯಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಕಾಂಡೋಮ್‌ಗಳು ಕಡ್ಡಾಯವಾಗಿದ್ರೂ ಈಗಿನ ಪರಿಸ್ಥಿತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ಮಾಸ್ಕ್​​ಗಳು ಮತ್ತು ಕೈಗವಸುಗಳು ಸಹ ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಸೋಂಕು ನಿವಾರಕಗಳನ್ನು ಬಳಸಲು ಸೂಚಿಸಲಾಗಿದೆ. ಜೊತೆಗೆ ಗ್ರಾಹಕರಿಗೆ ಕೆಮ್ಮು ಅಥವಾ ಜ್ವರ ಇದೆಯೇ ಎಂಬುದನ್ನು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲೇ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅಂತ ಲಕ್ಷಣಗಳಿರುವ ಗ್ರಾಹಕರು ಇದ್ದರೆ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸದಂತೆ ಎನ್​​ಜಿಒ ಸೂಚಿಸಿದೆ. ಹಾಗೆಯೇ ಲೈಂಗಿಕ ಕಾರ್ಯಕರ್ತೆಯರು ತಮ್ಮ ರೂಮ್​​ ಬಿಟ್ಟು ಹೊರಗೆ ಬರದಂತೆ ಹಾಗೂ ಅನಾರೋಗ್ಯ ಅಥವಾ ಹೆಚ್​​ಐವಿ ಪೀಡಿತ ಕಾರ್ಯಕರ್ತೆಯರು ಲೈಂಗಿಕ ಕ್ರಿಯೆಯಿಂದ ದೂರ ಉಳಿಯುವಂತೆ ಎನ್​​ಜಿಒ ಸೂಚಿಸಿದೆ.

ಫೋನ್‌ಸೆಕ್ಸ್ ಆಯ್ಕೆ ಮಾಡಿಕೊಳ್ಳಲು ಎನ್‌ಜಿಒ ಅವರನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಈಗಾಗಲೇ ವರ್ಚುವಲ್ ಸೆಕ್ಸ್ ವ್ಯವಹಾರದಲ್ಲಿ ತೊಡಗಿರುವವರಿಗೆ ಇತರ ಲೈಂಗಿಕ ಕಾರ್ಯಕರ್ತೆಯರಿಗೆ ಅದರ ಬಗ್ಗೆ ಗೈಡ್​​ ಮಾಡುವಂತೆ ಎನ್​​ಜಿಒ ಹೇಳಿದೆ. ಕೋವಿಡ್​-19 ಅಪಾಯದ ಹಿನ್ನೆಲೆ ಯಾವುದೇ ದೈಹಿಕ ಸಂಪರ್ಕಕ್ಕೆ ಒಳಗಾಗದೆಯೂ ಅವರು ಜೀವನೋಪಾಯ ಕಂಡುಕೊಳ್ಳಲು ಈ ಫೋನ್‌ಸೆಕ್ಸ್ ಆಯ್ಕೆಗೆ ಉತ್ತೇಜಿಸಲಾಗ್ತಿದೆ. ಈ ಸಂಬಂಧ ರೆಡ್​​ ಲೈಟ್​​ ಏರಿಯಾ ವ್ಯಾಪ್ತಿಯ ಪೊಲೀಸ್​ ಅಧಿಕಾರಿಗಳು ಎನ್​​ಜಿಒದೊಂದಿಗೆ ಸಭೆ ನಡೆಸಿದೆ. ಎಲ್ಲಾ ಮುಂಜಾಗ್ರತಾ ಕ್ರಮಕೈಗೊಂಡು ಕೆಲಸ ಆರಂಭಿಸುವಂತೆ ಎಚ್ಚರಿಕೆ ನೀಡಿದ್ದಾರೆ.

For All Latest Updates

ABOUT THE AUTHOR

...view details