ಕರ್ನಾಟಕ

karnataka

ETV Bharat / bharat

ತಾಯ್ನೆಲಕ್ಕಾಗಿ ಮಡಿದ ಯೋಧರ ಕುಟುಂಬಕ್ಕೆ ಸಹಾಯ... 110 ಕೋಟಿ ರೂ. ದಾನ ನೀಡಲು ಮುಂದಾದ ವ್ಯಕ್ತಿ! - ಸಹಾಯಧನ

'ನನ್ನ ತಾಯ್ನೆಲಕ್ಕಾಗಿ ಬಲಿದಾನ ಮಾಡಿದ, ಪ್ರಾಣವನ್ನೇ ಅರ್ಪಣೆ ಮಾಡಿದ ಯೋಧರ ಕುಟುಂಬಗಳ ಬೆಂಬಲಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವೆ': ಮುರ್ತಾಜಾ ಎ ಹಮೀದ್

ಯೋಧರ ಕುಟುಂಬಕ್ಕೆ ಸಹಾಯ

By

Published : Mar 4, 2019, 4:45 PM IST

ಕೋಟಾ: ಫೆ.14ರಂದು ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್​ಪಿಎಫ್​ ಪಡೆ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಮಡಿದ ಹುತಾತ್ಮ ಯೋಧರ ಕುಟುಂಬಗಳಿಗೆ ಈಗಾಗಲೇ ದೇಶವೇ ಕಣ್ಣೀರು ಹಾಕಿದೆ.

ಇತ್ತ ಮಡಿದ ಯೋಧರ ಕುಟುಂಬಗಳಿಗೆ ಸಹಾಯ ಕೂಡ ಮಾಡಲಾಗುತ್ತಿದ್ದು, ಬ್ಯುಸಿನೆಸ್​​ಮೆನ್ಸ್​​, ರಾಜಕೀಯ ಮುಖಂಡರು ಹಾಗೂ ಕ್ರಿಕೆಟರ್ಸ್​ ಸೇರಿ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ರಾಜಸ್ಥಾನದ ಕೋಟಾದಲ್ಲಿ ವಾಸವಾಗಿರುವ ಮುರ್ತಾಜಾ ಎ ಹಮೀದ್ ಹುತಾತ್ಮ ಯೋಧರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಮುಂಬೈನ ಸರ್ಕಾರಿ ವಾಣಿಜ್ಯ ಕಾಲೇಜ್​​ನಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ಮುರ್ತಾಜ್​ ಹಮೀದ್​ ಈಗಾಗಲೇ ಪ್ರಧಾನಿ ಕಚೇರಿಗೆ ಇ-ಮೇಲ್​ ಸಂದೇಶ ರವಾನೆ ಮಾಡಿದ್ದು, ಪ್ರಧಾನಿ ಮೋದಿಯವರೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಲು ಸಮಯವಕಾಶ ಕೇಳಿದ್ದಾರೆ.

ಯೋಧರ ಕುಟುಂಬಗಳಿಗೆ ಬರೋಬ್ಬರಿ 110ಕೋಟಿ ಹಣ ಪರಿಹಾರ ರೂಪದಲ್ಲಿ ನೀಡಲು ಮುಂದಾಗಿರುವ ಇವರು, ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ ಬಳಿಕ ಅವರ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಹಣ ವರ್ಗಾವಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 110 ಕೋಟಿ ರೂ. ಕಾನೂನು ಬದ್ಧವಾದ ಹಣವನ್ನೇ ಮೃತಯೋಧರ ಕುಟುಂಬಕ್ಕೆ ಈ ಉದ್ಯಮಿ ದಾನ ನೀಡಲು ಮುಂದೆ ಬಂದಿದ್ದಾರೆ.

ಇಷ್ಟೊಂದು ಹಣ ನೀಡಲು ಕಾರಣ ಏನು ಎಂದು ಪ್ರಶ್ನಿಸಿದಾಗ, ನನ್ನ ತಾಯ್ನೆಲಕ್ಕಾಗಿ ಬಲಿದಾನ ಮಾಡಿದ, ಪ್ರಾಣವನ್ನೇ ಅರ್ಪಣೆ ಮಾಡಿದ ಯೋಧರ ಕುಟುಂಬಗಳ ಬೆಂಬಲಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವೆ ಎಂದು ತಿಳಿಸಿದ್ದಾರೆ. ಜತೆಗೆ ದೇಶದ ಪ್ರತಿಯೊಬ್ಬ ವ್ಯಕ್ತಿ ಕೂಡ ಯೋಧರ ಸಹಾಯಕ್ಕಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.

‘ಫ್ಯೂಲ್​ ಬರ್ನ್​ ರೇಡಿಯೇಷನ್​ ಟೆಕ್ನಾಲಜಿ’ ಎಂಬ ಸಂಶೋಧನೆ ಮಾಡಿದ್ದಾರೆ. ಇವರ ಈ ಸಂಶೋಧನೆಯಿಂದ, ನಿಮ್ಮ ವಾಹನಗಳನ್ನ ಜಿಪಿಎಸ್​ ಡಿವೈಸ್​ ಹಾಗೂ ಕ್ಯಾಮರಾ ಸಹಾಯವಿಲ್ಲದೇ ಟ್ರೇಸ್​ ( ಪತ್ತೆಹಚ್ಚು) ಮಾಡಬಹುದು ಎನ್ನಲಾಗಿದೆ. ಇನ್ನು ಪ್ರಧಾನಿ ಮುರ್ತಾಜ್​ ಎ ಹಮೀದ್​ ಗೆ ಸಮಯಾವಕಾಶ ನೀಡ್ತಾರೆ, ಇಲ್ಲ ಹಣ ಸ್ಪೀಕರಿಸಿ ಹುತಾತ್ಮ ಯೋಧರ ಕುಟುಂಬಕ್ಕೆ ನೀಡ್ತಾರಾ ಎನ್ನುವುದನ್ನ ಕಾದು ನೋಡಬೇಕಿದೆ.

ABOUT THE AUTHOR

...view details