ವಿಶೇಷ ಲೇಖನ: ಘರ್ಷಣೆಗ್ರಸ್ತ ಪ್ರದೇಶದಲ್ಲಿ ಪತ್ರಿಕೋದ್ಯಮ ಹಾಗೂ ಪತ್ರಕರ್ತನ ವೃತ್ತಿ ಕರ್ತವ್ಯಗಳು ಎರಡೆಲಗಿನ ಕತ್ತಿನ ಮೇಲಿನ ನಡಿಗೆಯಂತೆ. ಪತ್ರಕರ್ತರು ವಿಶ್ವಾಸಾರ್ಹ ಧ್ವನಿಗಳನ್ನು ಬಳಸಿಕೊಂಡು ತಮ್ಮ ವರದಿಗಳನ್ನು ಬರೆಯುತ್ತಿದ್ದರೆ, ಛಾಯಾಗ್ರಾಹಕ ಪತ್ರಕರ್ತರು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಸುದ್ದಿ ಸೆರೆಹಿಡಿಯುತ್ತಾರೆ. ಒಳ್ಳೆಯ ಮಾನವ ಆಸಕ್ತ ಸುದ್ದಿಯೆಡೆಗೆ ಒಮ್ಮ ಛಾಯಾಚಿತ್ರ ಪತ್ರಕರ್ತನನ್ನು ಎಳೆದೊಯ್ಯುವುದು ಆತನೊಳಗಿರುವ ಪತ್ರಕರ್ತನ ಗುಣ ಹಾಗೂ ಧೈರ್ಯ.
ಇಂತಹ ಧೈರ್ಯಕ್ಕೆ ಕೆಲವೊಮ್ಮೆ ಪತ್ರಕರ್ತರು ದುಬಾರಿ ಬೆಲೆ ತೆರಬೇಕಾಗುತ್ತದೆ; ಕಾಶ್ಮೀರದ ಛಾಯಾಚಿತ್ರ ಪತ್ರಕರ್ತ ಮುಸ್ತಕ್ ಅಲಿಯಂತೆ. ಮುಸ್ತಕ್ ಅಲಿ ಒಂದು ಪಾರ್ಸೆಲ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟರು. ಅಲ್ಲಿ ಸಹೋದ್ಯೋಗಿ ಹಾಗೂ ಪತ್ರಕರ್ತ ಯೂಸೂಫ್ ಜಮೀಲ್ ಬರೆದಿರಬಹುದಾದ ಸುದ್ದಿಯೊಂದಕ್ಕೆ ಇದು ಸಂಬಂಧಿಸಿರಬಹುದು. ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಸುದ್ದಿಯೊಂದಕ್ಕೆ ಅಗತ್ಯ ಚಿತ್ರ ಸೆರೆಹಿಡಿಯುವ ಸಂದರ್ಭದಲ್ಲಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಛಾಯಾಚಿತ್ರ ಪತ್ರಕರ್ತ ಪ್ರದೀಪ್ ಭಾಟಿಯಾ ಕಾರು ಬಾಂಬ್ ಸ್ಫೋಟಕ್ಕೆ ಬಲಿಯಾದರು.
ಜಮ್ಮು ಕಾಶ್ಮೀರದ ನಮ್ಮ ಮೂವರು ಪತ್ರಕರ್ತ ಸಹೋದ್ಯೋಗಿಗಳಾದ ಮುಖ್ತಾರ್ ಖಾನ್, ದಾರ್ ಯಾಸೀನ್ ಹಾಗೂ ಚನ್ನಿ ಆನಂದ್ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಗಸ್ಟ್ 5, 2019ರಂದು ರಾಜ್ಯದ ವಿಶೇಷ ಸ್ಥಾನಮಾನವನ್ನು ತೆಗೆದ ಬಳಿಕದ ಅವರ ಕಾಶ್ಮೀರ ಕುರಿತ ಚಿತ್ರಗಳಿಗೆ ಅವರಿಗೆ ಈ ಪ್ರಶಸ್ತಿ ಲಭ್ಯವಾಗಿದೆ. ಈ ಪ್ರಶಸ್ತಿ ಅವರು ಕಾಶ್ಮೀರದ ವಾಸ್ತವದ ಬಗ್ಗೆ ತೆಗೆದ ಛಾಯಾ ಚಿತ್ರಗಳ ಜೊತೆಗೆ ಈ ಚಿತ್ರಗಳನ್ನು ಸೆರೆ ಹಿಡಿದ ಸಂದರ್ಭವನ್ನು ಪರಿಗಣಿಸಿ ನೀಡಲಾಗಿದೆ.
ಒಂದು 6 ವರ್ಷದ ಬಾಲಕಿಯ ಕಣ್ಣಿಗೆ ಗಾಯವಾದ ಚಿತ್ರ ರಾಜಕೀಯ ಸಂಘರ್ಷಗಳು ಮಕ್ಕಳನ್ನು ಹೇಗೆ ಅಪಾಯಕ್ಕೆ ದೂಡಬಲ್ಲದು ಎಂಬುದನ್ನು ಪ್ರತಿಬಿಂಬಿಸುತ್ತದೆ. ಈ ನಿರ್ದಿಷ್ಟ ಚಿತ್ರ, ಇಡೀ ಪ್ರದೇಶದಲ್ಲಿ ಮಕ್ಕಳು ರಾಜಕೀಯ ಸಂಘರ್ಷಕ್ಕೆ ಹೇಗೆ ಬೆಲೆ ತೆರುತ್ತಿದ್ದಾರೆ ಎಂಬುದನ್ನು ಪ್ರತಿನಿಧಿಸುತ್ತದೆ. ಇನ್ನೊಂದು ಚಿತ್ರ ರಾಜ್ಯ ರಾಜಧಾನಿ ಶ್ರೀನಗರದಲ್ಲಿ ನಿಲ್ಲಿಸಲ್ಪಟ್ಟ ಬೈಕ್‍ಗೆ ಸಂಬಂಧಿಸಿದಂತೆ ಸಶಸ್ತ್ರ ಪಡೆಗಳು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯನ್ನು ಪ್ರತಿಬಿಂಬಿಸುತ್ತದೆ.
ಕಾಶ್ಮೀರದ ಹಳ್ಳಿಯೊಂದರಲ್ಲಿ ಸಶಸ್ತ್ರ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ಬಳಿಕ ಜನರು ಹಾಳಾದ ಮನೆಯೊಂದರ ಅವಶೇಷವನ್ನು ಸ್ವಚ್ಛಮಾಡುತ್ತಿರುವ ಚಿತ್ರ. ಈ ಮೂವರಿಗೆ ಪುಲಿಟ್ಜರ್ ಪ್ರಶಸ್ತಿ ತಂದುಕೊಟ್ಟಿದೆ. ಹಿಮಚ್ಛಾದಿತ ಚಳಿಗಾಲದಲ್ಲಿ ಸುರಕ್ಷಿತವಾಗಿರಲು, ಜನರು ಹೇಗೆ ಘರ್ಷಣೆಗಳಲ್ಲಿ ಹಾಳಾದ ಮನೆಗಳನ್ನು ತಾತ್ಕಾಲಿಕ ವಾಸಯೋಗ್ಯ ಗುಡಿಸಲಾಗಿ ಪರಿವರ್ತಿಸುತ್ತಾರೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಇದು ಜನರ ಬದುಕಿನ ಹಾಗೂ ಅವರ ಮನೆಗಳು ಎದುರಿಸುವ ಅನಿಶ್ಚಿತತೆಯನ್ನು ಪ್ರತಿಬಿಂಬಿಸುತ್ತವೆ.